Sunday, April 12, 2020

Srimad Bhagavatanukramanika- Contents -1

Sri Vadiraja Tirtha Swamiji, is very unique among Madhwa Swamis. his contribution to Sutra Prashana is immense, with vigour. however, many of us are unaware of his unique Index-Anukramanika to Srimad Bhagavata Mahapuranam, which only he could do after Madhva's Tatparya. it is a small yet very useful work in 117 stanzas summarizing the entire content of this Purana Raja. 

रमाया रमणं नत्वा तुरन्गवदनं हरिं |
अनुक्रमनिकाध्यायं व्याकरिष्ये यथामति || 

Sri Vadiraja Yati begins his index with an invocation to lord Hayavadana, his Upasya Murti. there are 20 chapters on Skandha I. how the great Purana emerged, after Mahabharata war, death of Duryodhana, death of Bhishma,  Krishna returns to Dwaraka, saves the embryo in Uttara's womb, death of Gandhari, Dhritarashtra, lamenting of Pandavas, their return to original forms of DEvaras-Yama, Indra, Vayu, Ashwini twins. after death of Pandavas, Pareekshit assumes the rule of Hastinapura.  During a hunting spree, he is cursed, and destined to be killed by a snake. Sri Shuka Muni, son of Bhagavan Vedavyasa arrives and relates him Sri Krishna Katha and a valuable message of Bhagavata Dharma to him.

Skandha-II
There are 10 adhyayas here. The greatness of Cosmic form- Vishvaroopa is described in this Skndha along with Yoga-Dharana and Mukti. how to attain Sri Vasudeva is put in  here. The first step will be Virakti- renunciation. Prana Yoga is also a topic described here. after that, formation of Cosmic egg- Brahmanda.  How Charurmukha Brahma was created by Sri Vishnu is described along with his great tapas. Bhakti stotra by Shukamuni comes here.  Then the boon received by him. 

Saturday, May 4, 2019

Sri Vijayadhvaja Tirtha (1450)




Srimad Bhagavatam is regarded with reverence by all Vaishnavas, even of Bengali Goudiya tradition. While Shankaracharya did not consider Puranas seriously, Ramanuja to some extent, Sri Madhvacharya to a large extent, has regarded at least 18 Puranas, if not minor ones as authentic texts on Indian philosophy via theology. Srimad Bhagavatam is called Puranaraja-King of Puranas, more trustworthy to understand Vedas. 
A few commentaries on this great Epic are written by Sridharaswamy, Chitsukhacharya of Advaitik tradition and Sri Vijayadhvaja Tirtha of Pejawar Matha, Udupi. It is Padaratnavalee, popularly called ' Vijayadhvajeeyam' a word by word commentary on Srimad Bhagavatam, very eloquent and poetic in nature, revealing the esoteric meaning of some verses in Bhagavatam, which is treated by many only as Krishna Katha- Story of Sri Krishna! It is more than this. 
As usual with even great scholars, we have fanciful stories on Saints of Madhva School of thought, which is wrongly construed as ' Bhakti Pantha', a school dedicated to just devotion than philosophy, which is a great irony. We have all stories on the lives of our Swamis or Saints, with least importance given to Historical records or chronology. 
Similarly, Sri Vijayadhvaja tirtha is made a contemporary of Sri Jayatirtha, the great Tikacharya, supreme commentator on Madhva's works, 18 available now. But Vijayadhvaja is 7th in succession to Madhva in Udupi Adhokshaja Matha line, who is junior to Sri Jayatirtha by chronological evidence than just stories. Some go to the extent of making Sri Vijayadhvaja being outlawed as Sanyasi, since he travelled by ship to Dwaraka, by Sri Raghunatha tirtha of Uttaradi Matha and astonishingly Sri Sripadarajaru of Padmanabha Tirtha line, who remained non-controversial saint helping common folk to know more of Madhva thought by way of his Kannada Kirtanas.  Both saints reportedly asked Vijayadhvaja to make propitiation for this sin, by writing a commentary on Bhagavatam. Dr BNK Sharma calls this as 'malicious' story. 
Sri Vijayadhvaja's personal information remains unknown, like most of Madhva saints, only his writing this great commentary at Kanva Tirtha, near Kasaragod, Kerala where his Brindavanam lies now.

Tuesday, August 21, 2018

Rig Bhashya of Acharya Madhva




Sri Madhvacharya is the first thinker who gave us a perfect interpretation of the Vedas, particularly the Rigveda. He rightly insisted that all words & phrases in the Veda refer to the Supreme Reality, Vishnu.

यथैवाज्ञादयः शब्दाः प्रवर्तन्ते जनार्दने ।
तथा निरुक्तिं वक्ष्यामो ज्ञानिनां ज्ञानसिद्धये।
- All words in the Veda refer only to Lord Vishnu, and hence we shall elucidate the etymological meaning of Veda accordingly. The first Sukta of Rigveda is a prayer to the Lord as  Agni= the foremost among divinity. Agraneetvam= the supremacy of Vishnu over other Angels is very much evident in the Veda Suktas.
The Rik ' Agnimeele purohitam' refers to Him, not to the Fire used in the rituals. Agryatva- Supremacy, Agranetrutva- the foremost among the divine, all mean to say that the real Agni is Vishnu. He is indeed Ratnadhaatama- bestower of all precious things to us through what we term Nature, by way of Light, Rains, Crops and what not!
Hence the Rishis, thinkers procured Rayi- spiritual & material wealth only through Agni form of the lord.
Sri Madhva has interpreted 40 Riks of Rigveda as an indicator to showthat all Vedic literature is nothing but prayer to Lord Narayana, the innate ( Antaryaamee) of all Angels, Nature, and the entire gamut of what we know & know not. However it was probably Acharya's indication that following this way of interpretation, the learned understand Veda accordingly as sublime prayer to Vishnu and powers he assigns to Devas.




ಶ್ರೀಮದಾಚಾರ್ಯರ ಋಗ್ಭಾಷ್ಯದ ಸೊಬಗು

ವೇದಭಾಷ್ಯಕಾರರಲ್ಲಿ ಶ್ರೀ ಮಧ್ವಾಚಾರ್ಯರೇ ಮೊದಲಿಗರು. ಅವರು ಋಗ್ವೇದದ 40 ಋಕ್ಕುಗಳಿಗೆ ಮಾತ್ರ ಭಾಷ್ಯ ರಚಿಸಿದ್ದಾರೆ. ಆಚಾರ್ಯರ ಭಾಷ್ಯದ ಉದ್ದೇಶ ಕೇವಲ ವೇದಸೂಕ್ತಗಳಿಗೆ ಅರ್ಥ ಬರೆಯುವುದಷ್ಟೇ ಅಲ್ಲ. ಪ್ರತಿಯೊಂದು ವೇದವೇದಸೂಕ್ತವೂ “ ವೇದೈಶ್ಚ ಸರ್ವೈರಹಮೇವ ವೇದ್ಯಃ’ ಎಂಬ ಗೀತಾಚಾರ್ಯ ಶ್ರೀಕೃಷ್ಣ ಪರಮಾತ್ಮನ ಮಾತನ್ನು ಸರಿಯಾಗಿ ಅರ್ಥೈಸಿಕೊಂಡವರು ಜೀವೋತ್ತಮರಾದ ಮುಖ್ಯಪ್ರಾಣಾವತಾರಿ ಶ್ರೀ ಮಧ್ವರೊಬ್ಬರೇ.
ಈ  ಗ್ರಂಥದ ಮಂಗಳಾಚರಣ ಪದ್ಯ ಹೀಗಿದೆ:
ನಾರಾಯಣಂ- ನಿಖಿಲಪೂರ್ಣಗುಣಾರ್ಣಮುಚ್ಚ- ಸೂರ್ಯಾಮಿತದ್ಯುತಿ-ಮಶೇಷ ನಿರಸ್ತದೋಷಮ್ ।
ಸರ್ವೇಶ್ವರಂ- ಗುರುಮಜೇಶನುತಂ- ಪ್ರಣಮ್ಯ- ವಕ್ಷ್ಯಾಮೃಗರ್ಥಮತಿ-ತುಷ್ಟಿಕರಂ ತದಸ್ಯ ॥
 ಸಕಲ ಕಲ್ಯಾಣಗುಣಪೂರ್ಣನೂ, ಕೋಟಿಸೂರ್ಯರನ್ನು ಮೀರಿದ ಕಾಂತಿಯುಳ್ಳವನೂ, ದೋಷದೂರನೂ,  ಎಲ್ಲರಿಗೂ ಸ್ವಾಮಿಯೂ, ಬ್ರಹ್ಮ ರುದ್ರೇಂದಾದಿ ವಂದ್ಯನೂ, ಆದ  ಶ್ರೀಮನ್ನಾರಾಯಣನಿಗೆ ನಮಸ್ಕಾರ ಮಾಡಿ, ಆ ಶ್ರೀಹರಿಗೆ ಅತಿಪ್ರಿಯವಾದ ಋಗ್ವೇದದ ಅರ್ಥವನ್ನು ಈ ಭಾಷ್ಯದ ಮೂಲಕ ಹೇಳುತ್ತಿದ್ದೇನೆ.
ಎಂದು ಗ್ರಂಥಾರಂಭದಲ್ಲಿ ಸಂಕಲ್ಪಿಸಿದ ಆಚಾರ್ಯರು ಋಗ್ವೇದ ಸಂಹಿತೆಯ ಮೊದಲ 40 ಸೂಕ್ತಗಳಿಗೆ ಮಾತ್ರ ಭಾಷ್ಯವನ್ನು ರಚಿಸಿದ್ದಾರೆ.
ಶ್ರೀ ಮಧ್ವರಿಗಿಂತ ವೇದಭಾಷ್ಯ ರಚಿಸಿದ ಸಾಯಣಾಚಾರ್ಯರು ವೇದಗಳಿಗೆ ಆಧ್ಯಾತ್ಮಿಕವಾದ ಅರ್ಥವೂ ಇದೆ ಎಂದೊಪ್ಪಿದ್ದರೂ, ಅದರ ಬಗ್ಗೆ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಆದರೆ ಇವರೆಲ್ಲರಿಗಿಂತ ಪ್ರಾಚೀನರಾದ ಯಾಸ್ಕಾಚಾರ್ಯರು ತಮ್ಮ ನಿರುಕ್ತದಲ್ಲಿ ಹೀಗೆ ನುಡಿದಿದ್ದಾರೆ:
ಯದ್ಗೃಹೀತಮವಿಜ್ಞಾತಂ ನಿಗದೇನೈವ ಶಬ್ದ್ಯತೇ ।
ಅನಗ್ನಿರಿವ ಶುಷ್ಕೇಧೋ ನ ತಜ್ಜ್ವಲತಿ ಕರ್ಹಿಚಿತ್ ।
ವೇದಾಭ್ಯಾಸ ಮಾಡಿದವರೂ ಕೂಡಾ ಆ ಸೂಕ್ತಗಳ ಅರ್ಥವನ್ನು ಯಾರು  ತಿಳಿಯಲು ಪ್ರತ್ನಿಸುವುದೇ ಇಲ್ಲವೋ, ಅವರು ಒಣಗಿದ ಕಟ್ಟಿಗೆಯು ಬೆಂಕಿಯ ಸ್ಪರ್ಶವಿಲ್ಲದೆ ಹೇಗೆ ವ್ಯರ್ಥವಾಗುವುದೋ ಹಾಗೆ ಅವರ ಜ್ಞಾನವು ವ್ಯರ್ಥವಾಗುತ್ತದೆ.

ಈ ಮಾತನ್ನು ಸಾಯಣರು ನೇರವಾಗಿ ಹೇಳದೆ,
ಪೂರ್ವಕಾಂಡೋಕ್ತಸ್ಯ ಧರ್ಮಸ್ಯ ಜ್ಞಾನಂ ಪುಣ್ಯಮ್ ।
ಉತ್ತರ ಕಾಂಡೋಕ್ತಸ್ಯ ಬ್ರಹ್ಮಣೋ ಜ್ಞಾನಂ ಫಲಮ್।
ಎಂದು ವೇದಗಳ ಕರ್ಮಕಾಂಡದ ಅಭ್ಯಾಸದಿಂದ ಕೇವಲ ಪುಣ್ಯಲಾಭವಾಗುತ್ತದೆ. ಜ್ಞಾನಕಾಂಡವನ್ನು ಅಭ್ಯಾಸ ಮಾಡಿದರೆ ಬ್ರಹ್ಮಜ್ಞಾನ ದೊರೆಯುತ್ತದೆಂದು ತಿಳಿಸಿ, ಅಪರೋಕ್ಷವಾಗಿ ವೇದಗಳಿಗೆ ಅಧ್ಯಾತ್ಮಪರ ಅರ್ಥವನ್ನು ತಿಳಿದರೆ ಬ್ರಹ್ಮಜ್ಞಾನಿಯಾಗುತ್ತಾರೆ ಎಂದು ಸೂಚಿಸಿದ್ದಾರೆ. ಇದಕ್ಕೆ ಮೀರಿದ ಅರ್ಥವೊಂದಿದೆ ಎಂಬ ಬಗ್ಗೆ ಅವರು ಪ್ರಯತ್ನಿಸಿಲ್ಲ.
ಆದರೆ ವೇದ ಭಾಗವಾದ ಆಥರ್ವವಣೋಪನಿಷತ್ತಿನಲ್ಲಿ:
‘ ದ್ವೇ ವಿದ್ಯೇ ವೇದಿತವ್ಯೇ ಇತಿಹಾಸ್ಯ ಬ್ರಹ್ಮವಿದೋ ವದಂತಿ।ಪರಾಚೈವಾ&ಪರಾ ಚ।– ವೇದದಲ್ಲಿ ಎರಡು ಪದರದ ಅರ್ಥವಿದೆ, ಒಂದು ಪರಾ ವಿದ್ಯೆ, ಇನ್ನೊಂದು ಅಪರಾ ವಿದ್ಯೆ ಎಂದು ಸ್ಪಷ್ಟಪಡಿಸಿದೆ. ಇದೇ ಉಪನಿಷತ್ತಿನಲ್ಲಿ ‘ ಪರಾ ತದಕ್ಷರಮಧಿಗಮ್ಯತೇ’ ಎಂದು ಹೇಳಲಾಗಿದೆ. ( ಆ. ಉ. 1. 5, 5)
ಕಾಠಕೋಪನಿಷತ್ತು “ ಸರ್ವೇ ವೇದಾ ಯತ್ಪದಮಾಮನಂತಿ’ ಎಲ್ಲ ವೇದಗಳೂ ಆ ಪರಮಾತ್ಮನನ್ನೇ ಹೊಗಳುತ್ತವೆ ಎಂದು ತಿಳಿಸುತ್ತದೆ.
ಹಿರಣ್ಯಗರ್ಭಃ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕ ಆಸೀತ್ ।
ಸ ದಾಧಾರ ಪೃಥಿವೀಂ ದ್ಯಾಮುತೇಮಾಂ ಕಸ್ಮೈ ದೇವಾಯ ಹವಿಷಾ ವಿಧೇಮ॥
ಈ ಮಂತ್ರಕ್ಕೆ ಆಚಾರ್ಯರು’ ಬ್ರಹ್ಮೈವಾಗ್ರ ಇತಿಹ್ಯುಕ್ತ್ವಾ ರುದ್ರಾದೀನಾಂ ತತೋ ಜನಿಃ – ಎಂದು ವ್ಯಾಖ್ಯಾನ ಮಾಡಿ, ಬ್ರಹ್ಮದೇವರೊಬ್ಬರೇ ಜಗತ್ತು ಹುಟ್ಟುವ ಮೊದಲು ಹುಟ್ಟಿ ಭಗವದ್ ಭಜನಾದಿಗಳಿಂದ ಚೆನ್ನಾಗಿದ್ದನು. ಹುಟ್ಟಿದ ವಸ್ತುಗಳಿಗೆ ಅಧಿಪತಿಯಾದ್ದನು. ಆತನು ಪೃಥಿವಿಯನ್ನು ಸ್ವರ್ಗಾದಿಗಳನ್ನು ಧರಿಸಿಕೊಂಡಿದ್ದಾನೆ. ಆದ ಕಾರಣ  ಆ ಬ್ರಹ್ಮದೇವರಿಗಾಗಿ ನಾವು ಹವಿಸ್ಸನ್ನು ಕೊಟ್ಟೆವು ಎಂಬ ವಿವರಣೆಯನ್ನು ನೀಡಿದ್ದಾರೆ.
ಸಾಮಾನ್ಯವಾಗಿ ನಾವು ಊಹಿಸುವ ‘ ಕಸ್ಮೈ ದೇವಾಯ ಹವಿಷಾ ವಿಧೇಮ?” ಎಂಬುದು ಪ್ರಶ್ನಾರ್ಥಕವಲ್ಲ! ‘ ನಾವು ಯಾವ ದೇವತೆಯನ್ನುದ್ದೇಶಿಸಿ ಹವಿಸ್ಸನ್ನು ಕೊಡೋಣ? ಎಂಬ ಸಂಶಯವಾಗಲಿ, ಇಲ್ಲಿ ಋಷಿಗಳಿಗುಂಟಾಗಲಿಲ್ಲ. ‘ ಕ’ ಎಂದರೆ ಚತುರ್ಮುಖ ಬ್ರಹ್ಮನ ನಾಮಧೇಯವಾಗಿದೆ. ಕಸ್ಮೈ= ಯಾರಿಗೆ? ಅಲ್ಲ. ಕ ಎಂದರೆ ಚತುರ್ಮುಖ ಬ್ರಹ್ಮನಾದುದರಿಂದ ಅವರಿಗೆ ಎಂಬ ಚತುರ್ಥೀ ವಿಭಕ್ತಿ ಪ್ರಯೋಗವಿದೆಂದು ಆಚಾರ್ಯರ ಅಭಿಮತ.
ಆದರೆ ಘಂಟಾಘೋಷವಾಗಿ ಸಕಲ ವೇದಗಳೂ ಆ ಶ್ರೀಹರಿಯ ಸ್ತೋತ್ರಗಳೇ ಎಂದು ಧೈರ್ಯವಾಗಿ ಹೇಳಿದ ಕೀರ್ತಿ ಶ್ರೀಮದಾನಂದ ತೀರ್ಥ ಭಗವತ್ಪಾದರಿಗೇ ಸಲ್ಲುತ್ತದೆ.   ಆದರೆ ಆಚಾರ್ಯರು ಋಗ್ವೇದದ ಮೊದಲ 40 ಸೂಕ್ತಗಳಿಗೆ ಮಾತ್ರ  ಏಕೆ ಭಾಷ್ಯರಚನೆ ಮಾಡಿದರು? ಈ ಭಾಷ್ಯಕ್ಕೆ ಉಪಸಂಹಾರ ಪದ್ಯ ಏಕಿಲ್ಲ? ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕುವ  ಅಗತ್ಯವೇ ಇಲ್ಲ.  ಇದೇ ರೀತಿಯಾಗಿ ಋಗ್ವೇದದ ಇತರ ಮಂತ್ರಗಳಿಗೂ ಅರ್ಥವನ್ನು ನಾವು ಮಾಡಿಕೊಳ್ಳಲು ಇದು ಮಾರ್ಗ ದರ್ಶಕವಷ್ಟೇ.
ಋಗ್ಭಾಷ್ಯಕ್ಕೆ ಮೊದಲ ಟೀಕೆ ರಚಿಸಿದ ಶ್ರೀ ಜಯತೀರ್ಥರು ತಮ್ಮ ಟೀಕೆಯ ಕೊನೆಯಲ್ಲಿ:
ದೇವತಾಃ ಕಂಚುಕಾಯಂತೇ ವೇದೋ ವಂದಿಜನಾಯತೇ ।
ಯಸ್ಯ ತಸ್ಮಿನ್ ರಮಾನಾಥೇ ಸುದೃಢಾ ಪ್ರೀತಿರಸ್ತು ಮೇ ।
ಯಾವ ರಮಾಪತಿಗೆ ದೇವತೆಗಳು ದಾಸರೋ, ವೇದಗಳು ಸ್ತುತಿಪಾಠಕರೋ ಆ ದೇವನಲ್ಲಿ ನನಗೆ ಸದಾ ದೃಢವಾದ ಪ್ರೀತಿ ( ಭಕ್ತಿ) ಇರಲಿ ಎಂದು ಪ್ರಾರ್ಥಿಸುತ್ತಾರೆ.
ಇದಕ್ಕೆ ಮೊದಲು ಟೀಕಾ ಕೃತ್ಪಾದರು: ನಾಕಾರ್ಷಂ ವಿಸ್ತರಭಯಾದಿಹ ತತ್ ಕ್ಷಮ್ಯತಾಂ ಬುಧೈಃ- ಈ ಭಾಷ್ಯಕ್ಕೆ ವಿಸ್ತಾರವಾದ ಟೀಕೆ ಬರೆಯಲಾಗದಿರುವುದನ್ನು ಸಜ್ಜನರು ಕ್ಷಮಿಸಲು ಎಂದು ವಿನಯದಿಂದ ವಿಜ್ಞಾಪನೆ ಮಾಡಿಕೊಂಡಿದ್ದಾರೆ ಎಂದ ಮೇಲೆ ಈ ಋಗ್ಭಾಷ್ಯದ ಮಹತ್ವ ನಮಗೆ ಅರಿವಾಗುತ್ತದೆ.
ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ ‘ ಮಂತ್ರಾರ್ಥ  ಮಂಜರೀ’ ಯಲ್ಲಿ ಹೀಗೆ ವಿವರಣೆ ಕೊಡುತ್ತಾರೆ:
‘ ಪೂರ್ವೋತ್ತರಾರ್ಧಾಭ್ಯಾಂ ಸಕಲಾನಿಷ್ಟನಿವೃತ್ತಿಂ ಸರ್ವಾಭೀಷ್ಟಪ್ರಾಪ್ತಿಂ ಚ ಭಗವತಃ ಸಕಾಶಾದ್ಭಕ್ತಾನಾಂ ಪ್ರತಿಪಾದಯನ್ ಮಂತ್ರವ್ಯಾಖ್ಯಾನೇನ ಸಮಾಪಿತವಾನ್ ಭಾಷ್ಯಕಾರಃ ।
-ತಾವು ರಚಿಸಿದ ಇತರ ಗ್ರಂಥಗಳಲ್ಲಿ ತಮ್ಮ ಮಹಿಮೆಯನ್ನು ಸೂಚ್ಯವಾಗಿ ‘ ಯಸ್ಯ ತ್ರೀಣ್ಯುದಿತಾನಿ ವೇದವಚನೇ ‘ ಎಂದು ತಿಳಿಸಿ, ಈ ಋಗ್ಭಾಷ್ಯದಲ್ಲಿ ವಿಷ್ಣು ಸರ್ವೋತ್ತಮತ್ವವನ್ನು ಪ್ರತಿಪಾದಿಸುವ
‘ ಉಪಪೃಕ್ತಃ ಕ್ಷತ್ರಿಯೈಃ ಸ ಆವೇಶೇನ ಜನಾರ್ದನಃ ।
ಹನ್ತಿ ಶತೄಂಶ್ಚ ತೈರ್ದೇವೋ ಭಯೇನ ಸ್ವಾಶ್ರಯಂ ದದೌ ।
 ಎಂಬ ಇಂದ್ರರೂಪಿ ಎನಿಸಿದ ಪರಮಾತ್ಮನ ಸ್ಮರಣೆಯನ್ನಿಲ್ಲಿ ಉಪಸಂಹಾರವಾಗಿ (  ವಿಷ್ಣೂತ್ಕರ್ಷೋಕ್ತಿಪರಸೂಕ್ತಮಂತೇ ವ್ಯಾಖ್ಯಾಯ ಸಮಾಪಿತವಾನ್ ಭಗವಾನಾಚಾರ್ಯಃ)  ರಚಿಸಿದ್ದಾರೆ ಎಂದು ಸ್ಪಷ್ಟೀಕರಣವನ್ನು ಅನುಗ್ರಹಿಸಿದ್ದಾರೆ.
ಶ್ರೀಮದಾಚಾರ್ಯರು 1) ಉದಾಹರಣೆಗಾಗಿ 40 ಸೂಕ್ತಗಳ ಭಾಷ್ಯ ರಚಿಸಿ, ಅದರಂತೆಯೇ ಎಲ್ಲ ಸೂಕ್ತಗಳೂ ಮೇಲ್ನೋಟಕ್ಕೆ ಯಾವ ದೇವತೆಯನ್ನೇ ಪ್ರಾರ್ಥಿಸಲಿ, ಅದು ಶ್ರೀಹರಿಸ್ತೋತ್ರವೇ ಎಂಬುದನ್ನು ಸೂಚಿಸಲು ಭಾಷ್ಯವನ್ನು ಇಲ್ಲಿಗೇ ಮುಕ್ತಾಯ ಮಾಡಿದ್ದಾರೆ.


ಆದರೆ ಈಗಿರುವ ಮುದ್ರಿತ ಸರ್ವಮೂಲಾದ್ಯಂತ ಶ್ಲೋಕಗಳಲ್ಲಿ
ಉಪಕ್ಷತ್ರಂ ಪೃಂಜೀತ ಹಂತಿ ರಾಜಭಿ
ರ್ಭಯೇ ಚಿತ್ ಸುಕ್ಷಿತಿಂ ದಧೇ ।
ಈ ಸಾಲುಗಳಿಲ್ಲ.
ನಾಸ್ಯ  ವರ್ತಾಭಿಗಂತಾ ತರುತಾ ಜೇತಾ ಚಾಸ್ಯ ನಹಿ ಕ್ವಚಿತ್
ಯುದ್ಧಂ ಮಹಾಧನಂ ತ್ವರ್ಭಂ ಪ್ರಸಿದ್ಧಂ ಧನಮೇವ ಹಿ ॥
ಎಂಬ ಮಂತ್ರ-ಭಾಗದ  ಕೊನೆಯ ಎರಡು ಸಾಲುಗಳು ಮಾತ್ರ ಮುದ್ರಿತವಾಗಿವೆ.
2) ಕೆಲವು ಪ್ರಕರಣ ಗ್ರಂಥಗಳನ್ನು ಬಿಟ್ಟರೆ ಆಚಾರ್ಯರು ತಮ್ಮೆಲ್ಲ ಗ್ರಂಥಗಳಿಗೂ ಮಂಗಳಾಚರಣ-ಉಪಸಂಹಾರ ಪದ್ಯಗಳನ್ನು ಅನುಗ್ರಹಿಸಿದ್ದಾರೆ. ಆದರೆ ಋಗ್ಭಾಷ್ಯಕ್ಕೆ ಶ್ರೀ ಜಯತೀರ್ಥರ ಕಾಲದಿಂದಲೂ ನಮಗೆ ದೊರೆತ ಋಗ್ಭಾಷ್ಯ ಗ್ರಂಥವು  ಈಗಿರುವಷ್ಟೇ ಲಭ್ಯವಿರುವ ಕಾರಣ ಈ ಗ್ರಂಥವನ್ನು ಇಲ್ಲಿಗೇ ಮುಕ್ತಾಯ ಮಾಡಿದ್ದಾರೆ ಎಂದು ಮಾತ್ರ 
***



Saturday, January 13, 2018

ಹರಪನ ಹಳ್ಳಿ ಭೀಮವ್ವ ( 1823-1902)

ಹರಪನ ಹಳ್ಳಿ  ಭೀಮವ್ವ 
ಕರ್ನಾಟಕ ಹರಿದಾಸ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ನಗಣ್ಯವೇನಲ್ಲ. ಪುರಂದರ ದಾಸರ ಪತ್ನಿ ಲಕ್ಷ್ಮೀಬಾಯಿ ಅವರು “ಶ್ರೀಪುರಂದರವಿಟ್ಠಲ” ಅಂಕಿತದಲ್ಲಿ ಹಲವಾರು ಕೃತಿಗಳನ್ನು ರಚನೆ ಮಾಡಿದ್ದು, ಅವುಗಳನ್ನು ಪುರಂದರ ದಾಸರದ್ದು ಎಂದೇ ಪರಿಗಣಿಸಲಾಗಿದೆ. ಆ ನಂತರ ಬಂದವರಲ್ಲಿ ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವ ಪ್ರಮುಖರು. ಉಳಿದ ಅನೇಕ ಅನಾಮಿಕ ಹರಿದಾಸ ಮಹಿಳೆಯರೂ ಇರಬಹುದು, ಅವರ  ಕೃತಿಗಳು ಪ್ರಚಾರವಾಗದೆ ಕಳೆದುಹೋಗಿರುವ ಸಾಧ್ಯತೆಗಳೇ ಹೆಚ್ಚು.
ಹರಪನಹಳ್ಳಿ ಭೀಮವ್ವನವರು ಈಗಿನ ದಾವಣಗೆರೆ ಜಿಲ್ಲೆಯ ನಾರಾಯಣ ಕೆರೆಯಲ್ಲಿ ( ಈಗ ಮುಳುಗಡೆಯಾಗಿದೆ) 1823ರಲ್ಲಿ ರಘುನಾಥಾಚಾರ್ಯ ಮತ್ತು ರಂಗಮ್ಮ ದಂಪತಿಗಳ ಮಗಳಾಗಿ  ಆಚಾರಸಂಪನ್ನರಾದ ವೈದಿಕ ಕುಟುಂಬದಲ್ಲಿ ಜನ್ಮ ತಾಳಿದರು. ಅವರು ಶ್ರೀ ರಾಯರ ಮಠದ ಅನುಯಾಯಿಗಳಾಗಿದ್ದವರು. ಬಾಲ್ಯದಿಂದಲೂ ಆಕೆ ವಿಲಕ್ಷಣ ಶಿಶುವಾಗಿ ಬೆಳೆದಳು. ಈ ಸಾಧ್ವಿಯ ಬಗ್ಗೆ ಅನೇಕ ಪವಾಡ ಸದೃಶ ಕತೆಗಳಿವೆ. ಮಗುವಿನ ಕೊರಳಿಗೆ ಹಾವು ಸುತ್ತಿಕೊಂಡಿದ್ದು, ಚೇಳು ಕಚ್ಚಲು ವಿಫಲವಾದದ್ದು ಹೀಗೆ. ಸದಾ  ಪರಮಾತ್ಮನ ಧ್ಯಾನಲ್ಲಿರುತ್ತಿದ್ದ ಭೀಮವ್ವನಿಗೆ ಆಗಿನ ಕಾಲದ ಸಂಪ್ರದಾಯದಂತೆ ಬಾಲ್ಯದಲ್ಲಿಯೇ ಮದುವೆಯೂ ಆಯಿತು. ಹನ್ನೊಂದು ವರ್ಷದ ಹುಡುಗಿಗೆ 45 ದಾಟಿದ ಮುನಿಯಪ್ಪ ಎಂಬಾತನೊಡನೆ ವಿವಾಹ ಜರುಗಿತು. ಭೀಮವ್ವ ಈಗ ಕೃಷ್ಣಾಬಾಯಿಯಾದಳು. ಕೆಲವು ವರ್ಷಗಳಲ್ಲಿ ಒಂದು ಗಂಡು, ಒಂದು ಹೆಣ್ಣು ಮಗುವಿನ ತಾಯಿಯೂ ಆದಳು. ಆಕೆಯ ಪತಿ ಮೃತನಾದಾಗ ಆಕೆಗೆ 36 ವರ್ಷವಾಗಿತ್ತು.
ಸಂಪ್ರದಾಯಸ್ಥ ಕುಟುಂಬದ ಆಕೆ ಈಗ ಮಡಿ ಹೆಂಗಸಾದಳು. ಮಕ್ಕಳ ಪೋಷಣೆ, ಮನೆಗೆಲಸದಲ್ಲಿ ಮಗ್ನಳಾದಳು. ಬಾಲ್ಯದಿಂದಲೂ ದೈವ ಭಕ್ತಳಾದ ಭೀಮವ್ವ ತಾನು ಕೇಳಿದ ಪೌರಾಣಿಕ ಪ್ರಸಂಗಗಳನ್ನಾಧರಿಸಿ, ಹಾಡುಗಳನ್ನೂ ಬರೆದಳು. ಆಕೆಯ ಸುಮಾರು 200 ಹಾಡುಗಳು ಮಾತ್ರ ದೊರೆತಿದ್ದು, ಉಳಿದವು ಕಳೆದುಹೋಗಿವೆ. ಇದರಲ್ಲಿ ಉಗಾಭೋಗ, ದ್ವಿಪದಿ, ಆರತಿ ಹಾಡು, ಮದುವೆಮನೆ ಹಾಡು, ಬೀಗರ ಹಾಡುಗಳೂ ಸೇರಿವೆ.
ತನ್ನ ಅಂಕಿತವಾಗಿ ‘ ಭೀಮೇಶ ಕೃಷ್ಣ’ ಎಂದು ಆ ಹಾಡುಗಳನ್ನು ಕೃಷ್ಣನಿಗೆ ಅರ್ಪಿಸಿದಳು. ಆಕೆ ರಚಿಸಿದ 145 ಹಾಡುಗಳು ದೊರೆತಿದ್ದು, ಪ್ರಕಟವೂ ಆಗಿವೆ. 1902ರಲ್ಲಿ ತುಂಗಭದ್ರೆಯ ತೀರದ ಹೊಸೂರು ಎಂಬಲ್ಲಿ ಆಕೆ ದೇಹತ್ಯಾಗ ಮಾಡಿದಳು ಎಂದು ತಿಳಿದುಬರುತ್ತದೆ.



Friday, December 22, 2017

Sri Narahari Tirtha

ಶ್ರೀ   ನರಹರಿ ತೀರ್ಥರು (1324-33)
ಶ್ರೀಮಧ್ವಾಚಾರ್ಯರ ಮೊದಲ ಸಾಲಿನ ಶಿಷ್ಯರಲ್ಲಿ ಶ್ರೀ ನರಹರಿ (ನರಸಿಂಹ) ತೀರ್ಥರು ಪ್ರಮುಖರು. ಅವರ ಬಗ್ಗೆ ಆಚಾರ್ಯರ ಜೀವನ ಗಾಥೆಯಾದ ಶ್ರೀಮಧ್ವ ವಿಜಯದಲ್ಲಿ ನೇರವಾಗಿ ಯಾವ ಪ್ರಸ್ತಾಪವೂ ಕಾಣುವುದುದಿಲ್ಲ. ಆದರೆ ಉಡುಪಿಯ ಆಷ್ಟ ಮಠಾಧೀಶರ ಬಗ್ಗೆ ಪಟ್ಟಿ ಮಾಡುವಾಗ ನಾರಾಯಣ ಪಂಡಿತಾಚಾರ್ಯರು, ‘ ನರಸಿಂಹಪದಾಧಾರಾಃ....’ ಎಂದು ಉಲ್ಲೇಖಿಸುತ್ತಾರೆ. ಈಗಿನ ಅಡಮಾರು ಮಠಕ್ಕೆ ಮೂಲ ಪುರುಷರು ನರಸಿಂಹ ತೀರ್ಥರೂ, ಇವರೇ ಪ್ರಸಿದ್ಧರಾದ ನರಹರಿ  ತೀರ್ಥರೂ ಆಗಿದ್ದರು.
ಶ್ರೀ ನರಹರಿ ತೀರ್ಥರು ಓಡಿಸ್ಸಾ  ಪ್ರದೇಶದಿಂದ ಬಂದವರು. ರಾಜಕಾರಣ, ಪಾಂಡಿತ್ಯ ಆಡಳಿತ ಸಾಮರ್ಥ್ಯ ಎಲ್ಲವನ್ನೂ ಹೊಂದಿದ್ದ ಅಪರೂಪದ ವ್ಯಕ್ತಿತ್ವ ಅವರದಾಗಿತ್ತು.
ಉಡುಪಿಯ ಆಷ್ಟ ಮಠಗಳ ಮೂಲ ಯತಿಗಳನ್ನು ಸ್ಮರಿಸುವ ಶ್ಲೋಕ ಹೇಗಿದೆ:
ವಂದೇ ಹೃಷೀಕೇಶಮಥೋ ನೃಸಿಂಹಮ್
ಜನಾರ್ದನಂ ಚಿಂತಯ ಧೀರುಪೇಂದ್ರಮ್ |
ಶ್ರೀವಾಮನಂ ಸಂಸ್ಮರ ವಿಷ್ಣುಮೇಮಿ
ಶ್ರೀರಾಮಮಂಚೇ&ಹಮಧೋಕ್ಷಜಮ್ ಚ ||
ಈ ಶ್ಲೋಕದಲ್ಲಿ ಎಂಟು ಮತಗಳ ಮೂಲ ಯತಿಗಳನ್ನೂ ಸ್ಮರಿಸಲಾಗಿದೆ. ಹಾಗೆ ನೋಡಿದರೆ, ಹೃಷೀಕೇಶ ತೀರ್ಥರ ನಂತರ ಉಡುಪಿ ಪರಂಪರೆಯಲ್ಲಿ ಬಂದ ಎರಡನೆಯ ಯತಿ ನರಹರಿ ತೀರ್ಥರೂ. ಇವರನ್ನು ಯಕ್ಷಗಾನ ಕಲೆಯ ಪ್ರವರ್ತಕರು ಎಂದೂ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಈಗಲೂ ಯಕ್ಷಗಾನ ಕಲಾವಿದರು ತಮ್ಮ ಹಣೆಯಲ್ಲಿ ಧರಿಸುವ ತಿಲಕ ಮಾಧ್ವರ ಅಂಗಾರ-ಅಕ್ಷತೆಯನ್ನು ಅನುಕರಿಸುತ್ತದೆ ಎನ್ನುವುದು ಗಮನಾರ್ಹವಾಗಿದೆ.
‘ ನರಸಿಂಹಪಾದಾಧಾರಾಃ ಎನ್ನುವ ಶಬ್ದಕ್ಕೆ ಸ್ವಯಂ ನಾರಾಯಣ ಪಂಡಿತರೇ ಭಾವಪ್ರಕಾಶಿಕೆಯಲ್ಲಿ ‘ ನರಹರಿ ತೀರ್ಥಾಃ’ ಎಂದು ವಿವರಿಸುತ್ತಾರೆ. ಹೀಗಾಗಿ ನರಸಿಂಹ ತೀರ್ಥರೆ ನರಹರಿ ತೀರ್ಥರು ಎಂದು ಸ್ಪಷ್ಟವಾಯಿತು. ಹಾಗಾದರೆ, ಅವರು ಉಡುಪಿಯ ಇತರೆ ಯತಿಗಳಂತೆ ಬಾಲ ಸನ್ಯಾಸಿಗಳೇ ಗೃಹಸ್ಥರೇ ಎಂಬ ಪ್ರಶ್ನೆ ಬರುತ್ತದೆ. ಈ ಮೇಲಿನ ಶ್ಲೋಕದಂತೆ ಮೊದಲು ಅವರು ಉಡುಪಿಯ ಅದಮಾರು ಮಠದ ಮೂಲ ಪುರುಷರಾಗಿದ್ದು, ಶ್ರೀಮದಾಚಾರ್ಯರ ಆದೇಶದಂತೆ ಕಲಿಂಗ ದೇಶಕ್ಕೆ ತೆರಳಿ ತಮ್ಮ ತಂದೆಯಂತೆ ತಾವೂ  ( ‘ಪಿತ್ರಾಚಾರಮುಪೈತಿ ಸೂನುರಿತಿ ಸನ್ನೀತಿಸ್ಥಿತೋ ಧರ್ಮತಃ) ಅಲ್ಲಿನ ರಾಜರಿಗೆ ಸಲಹೆಗಾರರಾಗಿದ್ದಿರಬಹುದು. ಈ ಬಗ್ಗೆ ಶ್ರೀಕೂರ್ಮಮ್ ಶಿಲಾ ಶಾಸನದಲ್ಲಿ 1285ರಲ್ಲಿ ಪ್ರಸ್ತಾಪವಿದೆ.
ಕಲಿಂಗ ರಾಜ್ಯದ ದೊರೆ ಮೊದಲ ನರಸಿಂಹ 1264ರಲ್ಲಿ  ಮೃತನಾದಾಗ, ಅಲ್ಲಿನ ರಾಣಿ ಗರ್ಭಿಣಿಯಾಗಿದ್ದು, ಆಕೆ ಶಿಶುವನ್ನು ಪ್ರಸವಿಸುವವರೆಗೆ ಆ ರಾಜ್ಯದ ಆಡಳಿತದ ಹೊಣೆಯನ್ನು ನರಹರಿ ತೀರ್ಥರು  ಹೊತ್ತು, ಆಚಾರ್ಯರ ಆದೇಶದಂತೆ ಅಲ್ಲಿಗೆ ತೆರಳುವ ಮೊದಲು’ ಕಮಲೇಕ್ಷಣ ತೀರ್ಥರನ್ನು ಅದಮಾರು ಮಠದ ಪೀಠಾಧಿಪತಿಯನ್ನಾಗಿ ನೇಮಿಸಿದರು. 1279ನೇ ಇಸವಿಯ ಮುನ್ನವೇ ಅವರು ಸನ್ಯಾಸ ಸ್ವೀಕರಿಸಿದ್ದರು. ಆ ನಂತರ ರಾಜ್ಯದ ರಕ್ಷಣೆಗಾಗಿ ಅಲ್ಲಿಗೆ ತೆರಳಿ, ತಮ್ಮ ಕರ್ತವ್ಯವನ್ನು ನಿರ್ವಹಿಸಿ, ಅಲ್ಲಿನ ಯುವರಾಜ ಪ್ರಾಪ್ತ ವಯಸ್ಕನಾದ ನಂತರ ಉದುಪಿಗೆ ಹಿಂದಿರುಗಿದರು. ಅಲ್ಲಿಂದ ಮರಳಿ ಬರುವಾಗ ಆ ಗಜಪತಿ ರಾಜನ ಕೋಶದಲ್ಲಿದ್ದ ಪುರಾತನ ಬ್ರಹ್ಮ ಕರಾರ್ಚಿತ ಎಂದು ಪ್ರಸಿದ್ಧವಾದ ಮೂಲರಾಮ, ಸೀತಾದೇವಿಯರ ಪ್ರತಿಮೆಗಳನ್ನು ತಂದು ಕ್ರಿ.ಶ. 1293ರಲ್ಲಿ  ಶ್ರೀಮದಾಚಾರ್ಯರಿಗೆ ಒಪ್ಪಿಸಿದರು.
ಆಚಾರ್ಯ ಮಧ್ವರು ಈ ಪ್ರತಿಮೆಗಳನ್ನು ಹಲವು ದಿನಗಳು ಪೂಜಿಸಿ, ಬದರಿಗೆ ತೆರಳುವ ಮೊದಲು ಶ್ರೀ ಪದ್ಮನಾಭ ತೀರ್ಥರ ವಶಕ್ಕೆ ಒಪ್ಪಿಸಿದರು. ಇದು ಪರಂಪರಾನುಗತವಾಗಿ ಘಟ್ಟದ ಮೇಲಿನ ಮಠಗಳಲ್ಲಿ ಮೂಲ ಪ್ರತಿಮೆಯಾಗಿತ್ತು. ಈ ಬಗ್ಗೆ ಇದ್ದ, ಇರುವ ವಿವಾದ ಇಲ್ಲಿ ಅನಗತ್ಯ.
ನರಹರಿ ತೀರ್ಥರು ಸ್ವಯಂ ಸಂಗೀತಾಸಕ್ತರೂ ಆಗಿದ್ದರು. ಒಂದೆರಡು ದೇವರ ನಾಮಗಳೂ ಅವರ ಹೆಸರಿನಲ್ಲಿ ದಾಖಲಾಗಿದೆ.
ಶ್ರೀ ನರಹರಿ ತೀರ್ಥರು ಶ್ರೀಮಧ್ವರ ಹಲವು ಗ್ರಂಥಗಳಿಗೆ ಟೀಕೆ ಬರೆದಿದ್ದಾರೆ. ಅವರು ಬರೆದ ‘ ಯಮಕಭಾರತ’ ಟೀಕೆ ‘ ಶ್ರೀಕೃಷ್ಣಪ್ರಕಾಶಿಕಾ  ತುಂಬಾ ಸುಂದರವಾಗಿದೆ. ನರಹರಿ ತೀರ್ಥರ ರಚಿತ ಇತರೆ ಟೀಕಾ ಗ್ರಂಥಗಳು:
1.      ಗೀತಾಭಾಷ್ಯ ಭಾವಪ್ರಕಾಶಿಕಾ
2.     ವಿಷ್ಣುತತ್ತ್ವವಿನಿರ್ಣಯ ಟೀಕಾ
3.     ಕರ್ಮನಿರ್ಣಯ ಟೀಕಾ
4.    ಬ್ರಹ್ಮಸೂತ್ರ ಭಾಷ್ಯ ಭಾವಪ್ರಕಾಶಿಕಾ
5.     ಶ್ರೀಕೃಷ್ಣಪ್ರಕಾಶಿಕಾ
ಇವುಗಳಲ್ಲಿ ಯಮಕಭಾರತ ಟೀಕಾ ( ಶ್ರೀಕೃಷ್ಣ ಪ್ರಕಾಶಿಕಾ)  ಮಾತ್ರ ಮುದ್ರಿತವಾಗಿದ್ದು, ಉಳಿದವು ಶ್ರೀ ಜಯತೀರ್ಥರೇ ಮೊದಲಾದ ಟೀಕಾಕಾರರಿಂದ ಉಲ್ಲೇಖಿತವಾಗಿದೆ.
ನರಹರಿ ತೀರ್ಥರ ಶ್ರೀಕೂರ್ಮದ ಶಾಸನ ದೊರೆಯುವವರೆಗೆ ಅವರ ಬಗ್ಗೆ ಅನೇಕ ವಿಷಯಗಳು ಪ್ರಕಟವಾಗಿಯೇ ಇರಲಿಲ್ಲ. ಅವರಿಗೆ ಸನ್ಯಾಸ ದೀಕ್ಷೆ ದೊರೆತಾಗ ಅವರ ವಯಸ್ಸು 22-25 ಇರಬಹುದು. ಅವರ ಹೆಸರನ್ನು ಉಲ್ಲೇಖಿಸಿವ 9 ಶಿಲಾ ಶಾಸನಗಳು ಶ್ರೀ ಕೂರ್ಮಮ್, ಸಿಂಹಾಚಲಮ್ ಮೊದಲಾದ ಕಡೆ ದೊರೆತಿವೆ.
ಒಡ್ಡವಾಡಿಯ ಮತ್ಸ್ಯ ವಂಶದ ದೊರೆಗಳು ಇವರ ಪ್ರಭಾವಕ್ಕೊಳಗಾಗಿ ವೈಷ್ಣವರಾದರು. ಇವರಲ್ಲಿ ಅರ್ಜುನ ನರಸಿಂಹ ವರ್ಧನ ದೊರೆಯಾದ, ಅನ್ನಮರಾಜ ಗೋಪಾಲವರ್ಧನನಾದ. ಮುಂಜಾದಿತ್ಯ ಶ್ರೀರಂಗವರ್ಧನ ಎನಿಸಿದ. ಕಳಿಂಗ ಹಾಗೂ ಆಂಧ್ರದೇಶದ ಹಲವು ರಾಜರು, ಸಾಮಂತರು, ಸಾಮಾನ್ಯರು ಆಗ ವೈಷ್ಣವ ದೀಕ್ಷೆಯನ್ನು ಸ್ವೀಕರಿಸಿದರು. ಎರಡನೆಯ ನರಸಿಂಹನ ಕಾಲದಲ್ಲೂ ಅವರು ಕ್ರಿಯಾಶೀಲರಾಗಿದ್ದರು. ಮಧ್ವಮತ ಪ್ರಸಾರಕ್ಕಾಗಿ ಸಿಂಹಾಚಲಂ ನಲ್ಲಿ ಮಠವೊಂದನ್ನು ಸ್ಥಾಪಿಸಿದ್ದರು.  ಅಲ್ಲಿ 1373ರ ವರೆಗೂ ಮಠವೊಂದು ಅಸ್ತಿತ್ವದಲ್ಲಿತ್ತು, ಶ್ರೀ ಜಗನ್ನಾಥ ತೀರ್ಥರು ಅಲ್ಲಿ ನರಹರಿ ತೀರ್ಥ ಸಂಸ್ಥಾನದ ಯತಿಗಳಾಗಿದ್ದರು ಎಂದು ಸಿಂಹಾಚಲಮ್ ದೇವಸ್ಥಾನದ ಬಗ್ಗೆ ಡಾ| ಸುಂದರಂ ಅವರು ಬರೆದ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ. ಅದು ಉಚ್ಛ್ರಾಯ ಸ್ಥಿತಿಯಲ್ಲಿದ್ದು,  ಒಂದೆರಡು ಪೀಳಿಗೆಯ ನಂತರ ನಿಂತುಹೋಯಿತು ( ಡಾ| ಬಿಎನ್ ಕೆ ಶರ್ಮಾ ಅವರ ‘ ದ್ವೈತ ವೇದಾಂತದ ಇತಿಹಾಸ-ಸಾಹಿತ್ಯ ಪುಸ್ತಕ) .
ಶ್ರೀ ನರಹರಿ ತೀರ್ಥರು 1333ರಲ್ಲಿ ಹಂಪಿಯ ಬಳಿಯ ಚಕ್ರತೀರ್ಥದ ಹತ್ತಿರ ವೃಂದಾವನಸ್ಥರಾದರು. 
-


Monday, October 30, 2017

ಶ್ರೀ ಶ್ರೀಪಾದರಾಜರಿಗೆ ಹಾಗೆ ಕರೆದವರು ಯಾರು?

























ಶ್ರೀರಘುನಾಥ ತೀರ್ಥರು ಹಾಗೂ ಶ್ರೀಶ್ರೀಪಾದರಾಜರ ಅನ್ಯೋನ್ಯ ಸಂಬಂಧ (2009) ) ಪುಸ್ತಕವನ್ನೋದಿ ನಮ್ಮ ಮಾಧ್ವ ವಿದ್ವಾಂಸರಲ್ಲಿ ಸಂಶೋಧನೆಯ ಬಗ್ಗೆ ಅತಿಕಡಿಮೆ ಗಮನವಿರುವುದು ತೀರಾ ಸ್ಪಷ್ಟವಾಗುತ್ತದೆ. ನಮಗೆ ಇಬ್ಬರೂ ಪೂಜ್ಯರೇ ಹೌದು. ನಾನೂ ಮುಳಬಾಗಿಲಿನಲ್ಲಿ ಹುಟ್ಟಿ ಈ ಕತೆಯನ್ನು ಹಲವಾರು ಬಾರಿ ಕೇಳಿ ಐತಿಹಾಸಿಕತೆ ಬಗ್ಗೆ ತಲೆಕೆಡಿಸಿಕೊಂಡು " ಅವರೇನೋ ಬರಕೋತಾರೆ, ಅದು ಮಠದ ಋಣ, ಅದಕ್ಕೆ ನೀನು ಯಾಕೆ ಒದ್ಯಾಡುತ್ತಿ? ಎಂದು ತಂದೆಯಿಂದ ಹಗುರವಾಗಿ ಬೈಸಿಕೊಂಡೂ ಇದ್ದೇನೆ. 
 ಈ ಮೊದಲು ಪ| ಚಿಕ್ಕೆರೂರು ಗೋವಿಂದಾಚಾರ್ಯ, ಚೀ. ರಘುನಾಥಾಚಾರ್ಯ, ಈಗ ಮುಕ್ಕುಂದಿ ಶ್ರೀಕಾಂತಾಚಾರ್ಯರು ಈ ವಿಷಯದ ಬಗ್ಗೆ ಬರೆದಿದ್ದಾರೆ. 

. ಈ ಪುಸ್ತಕದ ೬೭ ಪುಟಗಳಲ್ಲಿ ವಿಷಯದ ಬಗ್ಗೆ ಇರುವುದುು. ೨೯-೬೭ರವರೆಗೆ ಮಾತ್ರ! ಉಳಿದಂತೆ ಶ್ರೀಪಾದರಾಜ ಮಠದ ಶ್ರೀಗಳ ಆಶೀರ್ವಚನದ ಹೊರತಾಗಿ ಹಲವು ವಿದ್ವಾಂಸರ, ಕುಂ ವ್ಯಾಸರಾಜ ಮಠದ, ಡಾ| ಶ್ರೀನಿವಾಸ ಹವನೂರ, ಪ್ರೊ| ಕೆಟಿ ಪಾಂಡುರಂಗಿಯವರ ಅನಿಸಿಕೆ, ಆಶೀರ್ವಾದ ವಚನಗಳಿವೆ! ಎಂದರೆ ಅದು ಆಗಿನ ಪೀಠಾಧಿಪತಿ ಶ್ರೀ ವಿಜ್ಞಾನನಿಧಿ ತೀರ್ಥರಿಗೂ ಸಮ್ಮತವಿರಲಿಲ್ಲ ಎಂದಾಯಿತು.  
 ಇಬ್ಬರು ಯತಿಗಳೂ ಸಮಕಾಲೀನರು ಎನ್ನುವ ಸಂದರ್ಭದ ಈ ಕತೆಗೆ ಪೂರಕವಾಗಿ ಶ್ರೀವ್ಯಾಸರಾಯರ ಪದದ ತುಣುಕೊಂದನ್ನೂ ಸೇರಿಸಲಾಗಿದೆ.
ಇದು ಹೀಗಿದೆ:
ಪರಮತಘನವನ ಪಾವಕನೆ 
ಶರಣು ಭೂಸುರನುತ ಸಿರಿ ನಾರಾಯಣ ಯೋಗಿ|
---------------------------------
ಸುರನಾಥಪುರಕಂದು ವರ ಪುಷ್ಪವಿಮಾನದಿ
ಸರಿಯುತಲಿರೆ ರಘುನಾಥೇನ್ದ್ರರ ವರ
ವೃಂದಾವನ ಪ್ರದಕ್ಷಿಣೆಯ್ಲೀಕ್ಷಿಸಿ ಕರೆದು ಭಾಷಿಸಿ
ಕಳುಹಿದಾಶ್ಚರ್ಯಚರಿತಾ|| 
ಈ ಕೃತಿ ಕೇವಲ ಎರಡು ಹಸ್ತಪ್ರತಿಗಳಲ್ಲಿ ಮಾತ್ರ ಲಭ್ಯ!!
ನನಗೆ ತಿಳಿದಂತೆ ಶ್ರೀಪಾದರಾಜರ ಲಾಲಿ ಹಾಡುಗಳು ಸುಪ್ರಸಿದ್ಧವಾಗಿ ಮನೆ ಮಾತಾಗಿದೆ. 

ಜೋ ಜೋ ಶ್ರೀರಂಗಧಾಮಾ .... ಮತ್ತು ಲಾಲಿ ಗೋವಿಂದ ಲಾಲಿ.. ಇಂದಿಗೂ ಕನ್ನಡಿಗರ ಮನೆಮಾತಾಗಿದೆ. ಇದುವರೆಗೂ ಗುಪ್ತವಾಗಿದ್ದ
" ತೂಗಿರೆ ರಾಮನ| ತೂಗಿರೆ ವ್ಯಾಸನ|

 ತೂಗಿರೊ ವಿಠಲನ್ನ| " ಈಗ ಪ್ರತ್ಯಕ್ಷವಾಗಿದೆ.
 ಡಾ | ಶ್ರೀನಿವಾಸ ಹಾವನೂರರು ನಾನು ಉದಯವಾಣಿಯಲ್ಲಿದ್ದಾಗ,  ( 1979) " ತೂಗಿರೆ ರಾಯರ| ತೂಗಿರೆ ಗುರುಗಳ"  ಎಂಬ  ಕೃತಿಯನ್ನ್ನುಕಟುವಾಗಿ ಟೀಕಿಸಿದ್ದ್ದದರು

. ಈ ಒಂದು , ಉಲ್ಲೇಖ ಬಿಟ್ಟರೆ, ಶ್ರೀರಘುನಾಥ ತೀರ್ಥರ ಕೃತಿಗಳು, ಬದುಕು ಈ ಬಗ್ಗೆ ನನಗೆ ಯಾವ  ಮಾಹಿತಿಯೂ ಸಿಗಲಿಲ್ಲ. ಈ ಅನಾಮಿಕ ಸ್ವಾಮಿಗಳು ಶ್ರೀ ಶ್ರೀಪಾದರಾಜರಿಗೆ ಪ್ರೇರಕ ಶಕ್ತಿಯಾದರು ಎನ್ನುವುದೇ ಆಶ್ಚರ್ಯಕರವಾದ ಮಾಹಿತಿ. ಇತಿಹಾಸದಲ್ಲಿ ಆಸಕ್ತರು ಓದಿ ಈ ಪುಸ್ತಕವನ್ನು ಪಕ್ಕಕಿಡಬಹುದು.  ಭಾವುಕರು, ಮಠದ ಕಟ್ಟಾ ಅನುಯಾಯಿಗಳು ಭಲೇ ಎನ್ನಬಹುದು. ಎರಡೂ ಅಲ್ಲದ ನಾನು ಈ ಪುಸ್ತಕದ ಅಗತ್ಯವಾದರೂ ಹೊಸದಾಗಿ ಏನಿತ್ತು? ಎಂದು ಅಚ್ಚರಿಯಿಂದ ಕೇಳಲೂಬಹುದು. 

Thursday, September 29, 2016

Sri Padmanabha Tirtha ( 1318-1324 )





Sri Padmanabha Tirtha is foremost among the direct disciples of Sri Madhvacharya. He was a distinguished scholar and was recognized and honoured by people of those times as 'The first disciple of Sri Madhwacharya'.
He has the greatest honour of lecturing on the Vedas before an assembly of great scholars and was acclaimed to be a master in expounding the meanings of the Vedas. He is known for his learning, intelligence, everlasting devotion, and detachment to worldly affairs, service to His guru, etc. With all these extraordinary qualities, he has rightly succeeded Sri Madhva in the pontificial seat of Sriman Madhvacharya to which almost all the present day mathas trace their root.
Sri Padmanabha Tirtha's name  before initiation into Sannyasa by Madhvacharya, was Shobhana Bhatta. He was a renowned Advaita Scholar, accomplished logician and had immense faith  in Veda, Mahabharata and Puranas. He is said to have hailed from a region close to the river Godavari Punatamba, Paithan, Maharsadhtra.
He has won over many a great scholar in debates and refuted all the prevalent systems of philosophy before he met and  was defeated by Sri Madhva in a famous debate. His defeat at the hands of Sri Madhvacharya  made the Shobhana Bhatta to renounce the world and accept sanyasa from Sri Madhwacharya.
We feel  how blessed Sri Padmanabha Tirtha was to have had the opportunity of being the direct disciple of the Sarvajna Jagadguru Sri Madhwacharya himself.
After he drank the 'makaranda' - nectar called Brahmasootra Bhasya from Madhva, Sri Padmanabha Tirtha found other's Bhashyas  shallow.
He was so impressed by the teachings of Sri Madhwacharya that he used to enthral the audience by comparing the works of Sri Madhva to a divine Kalpavriksha, capable of fulfilling all of one's desires. His conviction in the doctrine of Sri Madhva can be known from his statement before the audience that the result one gets by studying the works of Madhva is beyond words and thoughts.
He was accredited to be the first to write a commentary, on the great Bhasya of Sri Madhva, which ably brings out the true meaning of the Bhasya. The prolific commentator of Madhva, Sri Jayateertha, honours this great saint in his magnum opus Sriman Nyaya Sudha and pictures him as the serene land, auspicious enough to be the home of the lord of Laxmi, and an ocean which gave rise to a bunch of invaluable pearls called Sannyaya Ratnavali.
Sri Jayateertha owes his scholarship to Sri Padmanabha Tirtha while saying
स पद्मनाभ तीर्थाख्ययोगिनोस्तु दृशे मम |
न तत्तवमार्गे गमनम्  विना यदुपजीवनम्  ||

I adore Sri Padmanabha Tirtha and look upon him as my guide, without whom, we hardly can pass through understanding of tattvavaada of Acharya Madhva. 
His line of succession via Sri Lakshmeedhara Teertha is present Sripadaraja Matha, Mulabagilu, Kolar District of Karnataka. 


ಶ್ರೀ ಪದ್ಮನಾಭ ತೀರ್ಥರ ವೈಯಕ್ತಿಕ ವಿವರಗಳು ಈ ವರೆಗೂ ನಿಖರವಾಗಿ ತಿಳಿದುಬಂದಿಲ್ಲದಿರುವುದು ವಿಷಾದದ ಸಂಗತಿಯೇ ಸರಿ. ಶ್ರೀಮದಾಚಾರ್ಯರ ಮೊದಲ ಸಾಲಿನ ಶಿಷ್ಯವರ್ಗಕ್ಕೆ ಸೇರಿದ ಶ್ರೀ ಪದ್ಮನಾಭ ತೀರ್ಥರೂ ಘಟ್ಟದ ಮೇಲಿನ ಎಲ್ಲ ಮಾಧ್ವ ಮಠಗಳಿಗೂ ಆದಿ ಗುರುಗಳೆನ್ನುವುದು ನಿರ್ವಿವಾದದ ವಿಷಯ. ಆ ನಂತರ ಅವರ ನೇರ ಪರಂಪರೆಯ ಶ್ರೀ ಲಕ್ಷ್ಮೀಧರ ತೀರ್ಥರ ಬೃಂದಾವನ ಸ್ಥಳ ಈಗಿನ ಮಠದ ಮಾಹಿತಿಯಂತೆ ಕೃಷ್ಣ ಜನ್ಮಭೂಮಿ ಎನಿಸಿರುವ ವೃಂದಾವನವೆಂದೇ ಹೇಳಲಾಗುತ್ತಿದೆ. ಅಲ್ಲಿ ನಿತ್ಯ ಪೂಜಾ ವ್ಯವಸ್ಥೆ ಇದೆಯೋ ಇಲ್ಲವೋ ಸ್ಪಷ್ಟವಾಗಿಲ್ಲ. ಸಂಚಾರತ್ವೇನ ಅವರು ಅಲ್ಲಿಗೆ ಹೋಗಿದ್ದರು ಎನ್ನಬಹುದಾದರೂ, ಎಲ್ಲಿಯೂ ಈ ಬಗ್ಗೆ ಪ್ರಸ್ತಾಪವೇ ಇಲ್ಲದಿರುವುದು ಆಶ್ಚರ್ಯವೇ ಸರಿ. ಅವರ ನಂತರದ ಶ್ರೀಪಾದರಾಜ ಮಠದ ಯತಿಗಳಲ್ಲಿ ಬಹುತೇಕರು ಶ್ರೀರಂಗಮ್,ಈರೋಡು, ಭವಾನಿ,  ಮುಳಬಾಗಿಲು, ಪಾಪಾರಪಟ್ಟಿ, ಮೊದಲಾದ ಹಲವು ಜಾಗಳಲ್ಲಿ ವೃಂದಾವನಸ್ಥ್ರಾಗಿದ್ದಾರೆ. ಒಬ್ಬರು ಅಬ್ಬೂರಿನಲ್ಲಿ ಬ್ರಹ್ಮಣ್ಯ ತೀರ್ಥ ಸನ್ನಿಧಿಯಲ್ಲಿ ವೃಂದಾವನಸ್ಥರಾಗಿದ್ದಾರೆ.
ವಿಶೇಷವೆಂದರೆ ಮುಳಬಾಗಿಲಿನಲ್ಲಿ ಎಣಿಕೆಯಷ್ಟು ಮಂದಿ ಶ್ರೀಪಾದರಾಜ ಮಠದ ಶಿಷ್ಯರಾಗಿದ್ದು, ಬಹುತೇಕರು ಶ್ರೀ ಸತ್ಯಪ್ರಿಯರು ಅಥವಾ ಅವರಿಗಿಂತ ಮೊದಲು ಉತ್ತರಾದಿ ಮಠೀಯರಾಗಿರುವುದು, ಕೆಲವರು ಶ್ರೀ ವ್ಯಾಸರಾಜ ಮಠದವರಾಗಿರುವುದೂ ಹೌದು.
ಶ್ರೀಪಾದರಾಜರಿಂದಲೇ ಈ ಮಠ ಪ್ರಸಿದ್ಧಿ ಪಡೆದ ಕಾರಣ ಅದೇ ಹೆಸರಿನಿಂದ ವಾದಿರಾಜರ ಕಾಲದಿಂದಲೂ ಉಲ್ಲೇಖಿತವಾಗಿದೆ. ವ್ಯಾಸನಕೆರೆ ಪ್ರಭಂಜನ ಅವರು ಹೇಳುವಂತೆ, ಬೇಲೂರಿನ ಸ್ತಂಭವೊಂದ ಮೇಲಿನ ‘ ಕಂಜನಾಭ ತೀರ್ಥರು ಪದ್ಮನಾಭ ತೀರ್ಥರೆಂದು ಕೇವಲ ಊಹಿಸಬಹುದು. ಇಲ್ಲದಿದ್ದರೆ, ಅಲ್ಲೊಂದು ಮಾಧ್ವ ಮಠವಿರಬೇಕಾಗಿತ್ತು, ಆದರೆ ಇಲ್ಲ. ಆದ್ದರಿಂದ ವಾದಿರಾಜರ ಮಾತು
‘  ಲಕ್ಸ್ಮೀನಾರಾಯಣಮುನೇಃ ವಿಬುಧೆಂದ್ರಾರ್ಯ ಯೋಗಿನಃ |
ವ್ಯಾಸತೀರ್ಥ ಮುನೇಶ್ಚಾಪಿ “ ಜಯತೀರ್ಥಾದಿರೇವ ಹಿ||
ಎಂಬ ಶ್ಲೋಕದಲ್ಲಿ ಸ್ಪಷ್ಟವಾಗಿ ಉಲ್ಲೇಖಿತವಾಗಿರುವ ಶ್ರೀಪಾದರಾಜ ಮಠ, ವಿಬುಧೇಂದ್ರ ಮಠ( ಈಗಿನ ರಾಯರ ಮಠ) ವ್ಯಾಸರಾಜ ಮಠ – ಈ ಮಠತ್ರಯಕ್ಕೂ ಶ್ರೀ ಜಯತೀರ್ಥರು “ ಆದಿ ಗುರುಗಳಾಗಿ’ ಆದರಣೀಯರೆನಿಸಿದ್ದಾರೆ. ಇಲ್ಲಿ ಶ್ರೀ ವಾದಿರಾಜರು ಸುಳ್ಳು ಹೇಳುವ ಅಗತ್ಯವೇ ಇಲ್ಲ. ಕಾರಣ ಅವರು ಉಡುಪಿಯ ಶ್ರೀ ವಿಷ್ಣುತೀರ್ಥ ( ಸೋದೇ) ಮಠದ ಯತಿಗಳು ಮತ್ತು ಶ್ರೀ ಶ್ರೀಪಾದರಾಜ-ಶ್ರೀ ವ್ಯಾಸರಾಜರ ನಿಕಟ ಪರಿಚಯವಿದ್ದವರು. ಒಂದು ಸಂಪ್ರದಾಯದಂತೆ ಶ್ರೀ ವ್ಯಾಸತೀರ್ಥರೆ ವಾದಿರಾಜರ ವಿದ್ಯಾಗುರುಗಳು ಎಂಬ ನಂಬಿಕೆ ಇದೆ. ಶ್ರೀ ವಾದಿರಾಜ ವಿರಚಿತ ಅಶ್ವಧಾಟಿಯ “ ದ್ವೈಪಾಯನೋತ್ತಮ...’ ಎಂಬ ಶ್ರೀಪಾದರಾಜಸ್ತೋತ್ರವಿದೆ.
ಇಲ್ಲಿ ನಾನು ಪ್ರಸ್ತುತಪಡಿಸುವುದಿಷ್ಟೆ. ಭೌಗೋಳಿಕ ಕಾರಣಗಳಿಂದಾಗಿ, ಮಾಧ್ವರು ಹಲವು ಮಠಗಳ ಶಿಷ್ಯರಾಗಿದ್ದರೂ ಮೂಲ ಗುರುಗಳು ಶ್ರೀಮನ್ ಮಧ್ವಾಚಾರ್ಯರೆ ಅಲ್ಲವೇ? ತಮ್ಮ ಅಂತ್ಯಕಾಲ ಸಮೀಪಿಸಿದಾಗ, ಅವರು ಅಲ್ಲಿಯೇ ವೃಂದಾವನಸ್ಥರಾಗಿದ್ದಾರೆ. ಇಂಥಾ ಸರಳ ಸತ್ಯವನ್ನು ಅರ್ಥ ಮಾಡಿಕೊಳ್ಳದೆ ನಮ್ಮದು ಮೂಲ ಮಠ ಎಂದು ಯಾರೂ ಕಚ್ಚಾಡುವ ಅಗತ್ಯವೇ ಇಲ್ಲ. ಎಲ್ಲ ಮಾಧ್ವ ಮಠಗಳಿಗೂ ಶ್ರೀ ಮಧ್ವರು, ಶ್ರೀ ಪದ್ಮನಾಭ ತೀರ್ಥರು ಮೂಲ ಮತ್ತು ಪ್ರಥಮ ಗುರುಗಳು ಎಂದರ್ಥಮಾಡಿಕೊಂಡರೆ ಸಾಕು. ನಮ್ಮ 100ಮಂದಿ ಮಾಧ್ವರಲ್ಲಿ 4 ಮಂದಿ ಸಂಸ್ಕೃತ ಬಲ್ಲವರು, ಅದರಲ್ಲಿ ಇಬ್ಬರು ಶಾಸ್ತ್ರಾಧ್ಯಯನ ಮಾಡಿದವರು, ಉಳಿದವರು ಹರಿದಾಸರ ಮೂಲಕವೋ ಕನ್ನಡ ಲಿಪಿಯ ಅನುವಾದಿತ ಗ್ರಂಥಗಳ ಸಹಾಯದಿಂದಲೋ ಯಥಾ ಶಕ್ತಿ ಮಧ್ವಮತದ ಸಿದ್ಧಾಂತವನ್ನು ಸ್ವಲ್ಪ ಅರಿತವರು. ಆದರೆ ಮಠದ ವಿಷಯ ಬಂದಾಗ ನಮ್ಮದೇ ಮೂಲ ಮಠ ಎಂದು ವಾದಿಸುವುದು ನಿರರ್ಥಕ ಮತ್ತು ವಿಹಿತವಲ್ಲ ಎಂದು ನನ್ನ ಅನಿಸಿಕೆ.


Vidyaranya

  Sri Vidyaranya Swamy is remembered as    Advaita pontiff,  at Sringeri Pitha,  who mainly toured Karnataka. Many believe he is same as Min...