Saturday, January 13, 2018

Harapanahalli Bhimavva ( 1823- 1902)

ಹರಪನ ಹಳ್ಳಿ  ಭೀಮವ್ವ ( 1823-1902)
ಕರ್ನಾಟಕ ಹರಿದಾಸ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ನಗಣ್ಯವೇನಲ್ಲ. ಪುರಂದರ ದಾಸರ ಪತ್ನಿ ಲಕ್ಷ್ಮೀಬಾಯಿ ಅವರು “ಶ್ರೀಪುರಂದರವಿಟ್ಠಲ” ಅಂಕಿತದಲ್ಲಿ ಹಲವಾರು ಕೃತಿಗಳನ್ನು ರಚನೆ ಮಾಡಿದ್ದು, ಅವುಗಳನ್ನು ಪುರಂದರ ದಾಸರದ್ದು ಎಂದೇ ಪರಿಗಣಿಸಲಾಗಿದೆ. ಆ ನಂತರ ಬಂದವರಲ್ಲಿ ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವ ಪ್ರಮುಖರು. ಉಳಿದ ಅನೇಕ ಅನಾಮಿಕ ಹರಿದಾಸ ಮಹಿಳೆಯರೂ ಇರಬಹುದು, ಅವರ  ಕೃತಿಗಳು ಪ್ರಚಾರವಾಗದೆ ಕಳೆದುಹೋಗಿರುವ ಸಾಧ್ಯತೆಗಳೇ ಹೆಚ್ಚು.
ಹರಪನಹಳ್ಳಿ ಭೀಮವ್ವನವರು ಈಗಿನ ದಾವಣಗೆರೆ ಜಿಲ್ಲೆಯ ನಾರಾಯಣ ಕೆರೆಯಲ್ಲಿ ( ಈಗ ಮುಳುಗಡೆಯಾಗಿದೆ) 1823ರಲ್ಲಿ ರಘುನಾಥಾಚಾರ್ಯ ಮತ್ತು ರಂಗಮ್ಮ ದಂಪತಿಗಳ ಮಗಳಾಗಿ  ಆಚಾರಸಂಪನ್ನರಾದ ವೈದಿಕ ಕುಟುಂಬದಲ್ಲಿ ಜನ್ಮ ತಾಳಿದರು. ಅವರು ಶ್ರೀ ರಾಯರ ಮಠದ ಅನುಯಾಯಿಗಳಾಗಿದ್ದವರು. ಬಾಲ್ಯದಿಂದಲೂ ಆಕೆ ವಿಲಕ್ಷಣ ಶಿಶುವಾಗಿ ಬೆಳೆದಳು. ಈ ಸಾಧ್ವಿಯ ಬಗ್ಗೆ ಅನೇಕ ಪವಾಡ ಸದೃಶ ಕತೆಗಳಿವೆ. ಮಗುವಿನ ಕೊರಳಿಗೆ ಹಾವು ಸುತ್ತಿಕೊಂಡಿದ್ದು, ಚೇಳು ಕಚ್ಚಲು ವಿಫಲವಾದದ್ದು ಹೀಗೆ. ಸದಾ  ಪರಮಾತ್ಮನ ಧ್ಯಾನಲ್ಲಿರುತ್ತಿದ್ದ ಭೀಮವ್ವನಿಗೆ ಆಗಿನ ಕಾಲದ ಸಂಪ್ರದಾಯದಂತೆ ಬಾಲ್ಯದಲ್ಲಿಯೇ ಮದುವೆಯೂ ಆಯಿತು. ಹನ್ನೊಂದು ವರ್ಷದ ಹುಡುಗಿಗೆ 45 ದಾಟಿದ ಮುನಿಯಪ್ಪ ಎಂಬಾತನೊಡನೆ ವಿವಾಹ ಜರುಗಿತು. ಭೀಮವ್ವ ಈಗ ಕೃಷ್ಣಾಬಾಯಿಯಾದಳು. ಕೆಲವು ವರ್ಷಗಳಲ್ಲಿ ಒಂದು ಗಂಡು, ಒಂದು ಹೆಣ್ಣು ಮಗುವಿನ ತಾಯಿಯೂ ಆದಳು. ಆಕೆಯ ಪತಿ ಮೃತನಾದಾಗ ಆಕೆಗೆ 36 ವರ್ಷವಾಗಿತ್ತು.
ಸಂಪ್ರದಾಯಸ್ಥ ಕುಟುಂಬದ ಆಕೆ ಈಗ ಮಡಿ ಹೆಂಗಸಾದಳು. ಮಕ್ಕಳ ಪೋಷಣೆ, ಮನೆಗೆಲಸದಲ್ಲಿ ಮಗ್ನಳಾದಳು. ಬಾಲ್ಯದಿಂದಲೂ ದೈವ ಭಕ್ತಳಾದ ಭೀಮವ್ವ ತಾನು ಕೇಳಿದ ಪೌರಾಣಿಕ ಪ್ರಸಂಗಗಳನ್ನಾಧರಿಸಿ, ಹಾಡುಗಳನ್ನೂ ಬರೆದಳು. ಆಕೆಯ ಸುಮಾರು 200 ಹಾಡುಗಳು ಮಾತ್ರ ದೊರೆತಿದ್ದು, ಉಳಿದವು ಕಳೆದುಹೋಗಿವೆ. ಇದರಲ್ಲಿ ಉಗಾಭೋಗ, ದ್ವಿಪದಿ, ಆರತಿ ಹಾಡು, ಮದುವೆಮನೆ ಹಾಡು, ಬೀಗರ ಹಾಡುಗಳೂ ಸೇರಿವೆ.
ತನ್ನ ಅಂಕಿತವಾಗಿ ಭೀಮೇಶ ಕೃಷ್ಣ ಎಂದು ಆ ಹಾಡುಗಳನ್ನು ಕೃಷ್ಣನಿಗೆ ಅರ್ಪಿಸಿದಳು. ಆಕೆ ರಚಿಸಿದ 145 ಹಾಡುಗಳು ದೊರೆತಿದ್ದು, ಪ್ರಕಟವೂ ಆಗಿವೆ. 1902ರಲ್ಲಿ ತುಂಗಭದ್ರೆಯ ತೀರದ ಹೊಸೂರು ಎಂಬಲ್ಲಿ ಆಕೆ ದೇಹತ್ಯಾಗ ಮಾಡಿದಳು ಎಂದು ತಿಳಿದುಬರುತ್ತದೆ.Thursday, January 4, 2018

Sri Tyagarajaruಶ್ರೀ  ತ್ಯಾಗರಾಜರು ( 1767-1847)
ಯಾವುದೇ ಕರ್ನಾಟಕ ಸಂಗೀತ ಕಛೇರಿ ಇರಲಿ, ಅಲ್ಲಿ ತ್ಯಾಗರಾಜ-ಪುರಂದರ ದಾಸರು-ದೀಕ್ಷಿತರ ಕೃತಿಗಳ ಗಾಯನ ಹಿಂದಿನಿಂದಲೂ ನಡೆದು ಬಂದಿದೆ. ತ್ಯಾಗರಾಜರು ತೆಲುಗಿನ ಸಂತ ಕವಿ, ವಾಗ್ಗೇಯಕಾರರಾಗಿದ್ದರೂ, ಅವರು ಜಗತ್ತಿನಾದ್ಯಂತ ಖ್ಯಾತ ನಾಮರು, ಸಂಗೀತಪ್ರಿಯರಿಗೆ ಆರಾಧ್ಯ ಗುರುಗಳು. ಈ ವರ್ಷ ಜನೆವರಿ 6 ಶನಿವಾರ, ಅವರ ಸಮಾಧಿ ಸ್ಥಳ ತಿರುವಯ್ಯಾರಿನಲ್ಲಿ ಅವರ ಆರಾಧನೆ, ಗೋಷ್ಟೀಗಾಯನ ಸೇವೆ ನಡೆಯುತ್ತದೆ. ಮುತ್ತುಸ್ವಾಮಿ ದೀಕ್ಷಿತರು, ತ್ಯಾಗರಾಜರು ಮತ್ತು ಶ್ಯಾಮಾಶಾಸ್ತ್ರಿಗಳು ಸಂಗೀತ ಕ್ಷೇತ್ರದ ತ್ರಿಮೂರ್ತಿಗಳೆನಿಸಿದ್ದಾರೆ.
ಶ್ರೀ ತ್ಯಾಗರಾಜರು ಸಾಮಾನ್ಯ ಮುರುಗುನಾಡು ಶಾಖೆಯ ಬ್ರಾಹ್ಮಣ ಕುಟುಂಬದಲ್ಲಿ 1767ರಲ್ಲಿ ಸರ್ವಜಿತು ಸಂವತ್ಸರ ಚೈತ್ರ ಶುದ್ಧ ಸಪ್ತಮೀ ಎಂದರೆ ಮೇ 4 ರಂದು ರಾಮಬ್ರಹ್ಮಂ ಮತ್ತು ಸೀತಮ್ಮ ದಂಪತಿಗಳ ಮಗನಾಗಿ ತಿರುವೈಯ್ಯಾರಿನಲ್ಲಿ ಜನಿಸಿದರು. ಅವರ ಬಾಲ್ಯ ಸುಖಮಯವಾಗಿಯೇನೂ ಇರಲಿಲ್ಲ. ಅವರದು ಸಂಗೀತಗಾರರ ವಂಶ. ತಾಯಿಯ ತಂದೆ ಗಿರಿರಾಜ ಕವಿ ತಂಜಾವೂರಿನ ರಾಜರ ಆಸ್ಥಾನ ವಿದ್ವಾಂಸರಾಗಿದ್ದರು. ತುರುವಯ್ಯಾರಿನ ಕ್ಷೇತ್ರದೇವತೆ ಶಿವನ ತ್ಯಾಗರಾಜ ಎಂಬ ಹೆಸರನ್ನೇ ಮಗುವಿಗೆ ತಂದೆ ನಾಮಕರಣ ಮಾಡಿದರು. ಹೀಗೆ ತ್ಯಾಗರಾಜರ ತಾತ,  ಸೋದರಮಾವ ಇಬ್ಬರೂ ಸಂಗೀತ ಕಲಾವಿದರೆ ಆಗಿದ್ದರು.
ಹೀಗೆ ನಾದಮಯ ವಾತಾವರಣದಲ್ಲಿ ಹುಟ್ಟಿದ ತ್ಯಾಗರಾಜರಿಗೆ ವಿದ್ಯಾಸಕ್ತಿ ಕಡಿಮೆ, ನಾದಾಶಕ್ತಿ ಹೆಚ್ಚು! ಪಾರ್ವತಿ  ಎಂಬ ಕನ್ಯೆಯೊಡನೆ ಚಿಕ್ಕ ವಯಸ್ಸಿನಲ್ಲಿ ವಿವಾಹವಾದರೂ, ಆಕೆ ಅಲ್ಪಕಾಲದಲ್ಲೇ ತೀರಿಕೊಂಡರು. ಮತ್ತೆ ಅವರು ಕನಕಾಂಬಾಳ್ ಎಂಬಾಕೆಯನ್ನು ಮದುವೆಯಾಗಿ, ಹೆಣ್ಣು ಮಗುವಿನ ತಂದೆಯಾದರು. ಎರಡು ತಲೆಮಾರಿನ ನಂತರ ಈ ವಂಶವೇ ಕಡಿದುಹೋಯಿತು.
ತ್ಯಾಗರಾಜರು ಬಾಲ್ಯದಿಂದಲೇ ಆತ್ಮಾಭಿಮಾನಿ. ಅವರ ಸೋದರ ಅವರನ್ನು ತಂಜಾವೂರಿನ ಮಹಾರಾಜನಿಗೆ ಪರಿಚಯ ಮಾಡಿಕೊಡುತ್ತೇನೆ, ಹಣ ಸಿಕ್ಕು ಬಡತನ ನೀಗೀತು ಎಂದು ಆಶೆ ತೋರಿಸಿದರೂ ಅವರು ವಿಚಲಿತರಾಗಲಿಲ್ಲ. ಆಗ ಅವರು ನಿಧಿ ಚಾಲ ಸುಖಮಾ ರಾಮುನಿ ಸನ್ನಿಧಿ ಚಾಲ ಸುಖಮಾ? ರಾಜನ ಪುಡಿಗಾಸು ದೊಡ್ಡದೊ ರಾಮನ ಸಾನ್ನಿಧ್ಯ ಸುಖ ದೊಡ್ಡದೊ ಎಂದು ಅವನ ದುರಾಶೆಗೆ ಕಡಿವಾಣ ಹಾಕಿದರು. ಇದರಿಂದ ರೊಚ್ಚಿಗೆದ್ದ ಜಪ್ಯೇಶ ಎಂಬ ಆ ಸೋದರ ಅವರ ಪಾಲಿನ ಆಸ್ತಿಯನ್ನು ದಕ್ಕಿಸಿಕೊಂಡು ಮನೆಯಿಂದ ಹೊರದೂಡಿದನಂತೆ. ಅವರು ಪೂಜಿಸುತ್ತಿದ್ದ ಶ್ರೀರಾಮನ ವಿಗ್ರಹವನ್ನು ಕಾವೇರೀ ಪ್ರವಾಹದಲ್ಲಿ ಎಸೆದನಂತೆ.
ಹೀಗೆ ನಿರ್ಗತಿಕರಾದ ತ್ಯಾಗರಾಜರನ್ನು ತಿರುವೈಯ್ಯಾರಿನ ಜನ, ಹುಚ್ಚ, ಮೂರ್ಖ ಎಂದೆಲ್ಲಾ ಜಾರಿದರು. ಆದರೆ ರಾಮಭಕ್ತಿಸಾಗರದಲ್ಲಿ ಮುಳುಗಿಹೋಗಿದ್ದ ಅವರು ಊಂಛ ವೃತ್ತಿ, ತಿರಿದು ತಿಂದು ಆನಂದದಿಂದ ಸಂಗೀತಸುಧೆಯನ್ನು ಸವಿದರು. ಆಶಕಟಾರಿಗೆ ಅದನ್ನು ಉಣಿಸಿದರು. ತಮ್ಮ ಬದುಕಿನ ಬಹುಕಾಲ ತೀರ್ಥ ಯಾತ್ರೆ, ಸತ್ಸಂಗದಲ್ಲೇ ಕಳೆದರು. ಆಗ ಆಂಧ್ರ ತಮಿಳುನಾಡಿನಲ್ಲೂ ಜನಪ್ರಿಯವಾಗಿದ್ದ ಶ್ರೀಪುರಂದರ ದಾಸರ ಕೃತಿಗಳ ಪರಿಚಯ ಅವರಿಗಿತ್ತು. ತಮ್ಮ ಪ್ರಹ್ಲಾದ ಭಕ್ತಿ ವಿಜಯಮುಥನ ಕಾವ್ಯದಲ್ಲಿ ಅವರು ಪುರಂದರ ದಾಸರನ್ನು ಭಕ್ತಿಯಿಂದ ನಾರದರ ಜೊತೆಯಲ್ಲಿ ನಮಿಸುತ್ತಾರೆ.
ವಿಷ್ಣುವಿನ ದಶಾವತಾರಗಳಲ್ಲಿ ಶ್ರೀರಾಮ ಅವರ ಆರಾಧ್ಯ ದೈವ. ತಮ್ಮ ಗ್ರಾಮಾಧಿದೇವ ತ್ಯಾಗರಾಜ ಶಿವನಲ್ಲೂ ಭಕ್ತಿ. ಶ್ರೀರಾಮನೆ ತನ್ನ ತಂದೆ, ಶೀತಾಂಸಾಟೆ ತಾಯಿ, ಹನುಮನಾದಿಯಾಗಿ ಎಲ್ಲಾ ರಾಮಭಕ್ತರೂ ಬಂಧುಗಳು ಎಂದು ಅವರ ಅಚಲ ವಿಶ್ವಾಸವಾಗಿತ್ತು.  ಅವರ ಎಲ್ಲಾ ಕೃತಿಗಳಲ್ಲಿ ನಾವು ಇದನ್ನು ಕಾಣಬಹುದಾಗಿದೆ. 
ಭಕ್ತಿ ಇಲ್ಲದ ಸಂಗೀತ ಬರೇ ಗದ್ದಲ ಎಂದು ತಮ್ಮ ಒಂದು ಕೃತಿಯಲ್ಲಿ ಅವರು ಹೇಳುತ್ತಾರೆ. ಗೀತಾರ್ಥಮು ಸಂಗೀತಾನಂದಮು ನೀ ತಾವುನ ಜೂಡರಾ ಓ ಮನಸಾ” ಎಂಬಲ್ಲಿ ವೇದಾಂತ-ಸಂಗೀತ ಸಮಾನ,  ಎರಡು ಮಾರ್ಗದಿಂದಲೂ ದೇವರನ್ನು ಮುಟ್ಟಲು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ. ತ್ಯಾಗರಾಜರ ತೆಲುಗು ಭಾಷೆ ತಮಿಳು ಮಿಶ್ರಿತ. ಆದರೆ ಭಾವಕ್ಕೆ ಎಂದೂ ಅಲ್ಲಿ ಕೊರೆಯಿಲ್ಲ.
ಅವರ ನೂರಾರು ಕೃತಿಗಳು ಇಂದು ವಿಶ್ವಾದ್ಯಂತ ಸಂಗೀತ ಪ್ರಿಯರಲ್ಲಿ ಮನೆಮಾತಾಗಿದೆ.  ತ್ಯಾಗರಾಜರ ಎಂದುರೋ ಮಹಾನುಭಾವುಲು, ರಾಮಾ ನೀ ಸಮಾನಮೇವ್ವರು, ಮೋಹನ ರಾಮಾ... ನೀ ದಯರಾದಾ... ಚಕ್ಕನಿ ರಾಜಮಾರ್ಗಮು....ಗಿರಿರಾಜಸುತಾ ತನಯ... ಎಂಬ ಅವರ ಮೊದಲ ಕೃತಿ, ನಿಧಿ ಚಾಲಸುಖಮಾ..... ನಗುಮೋಮು .... ಇನ್ನೂ ನೂರಾರು ಕೃತಿಗಳು  ಸಂಗೀತಪ್ರಿಯರಿಗೆ ಸುಪರಿಚಿತವಾಗಿವೆ. ಇಂದಿಗೂ ಪುರಂದರ ದಾಸರಂತೆ ಅವರು ತಮ್ಮ ಕೃತಿಗಳ ಮೂಲಕ ಅಮರರಾಗಿದ್ದಾರೆ.
ಪ್ರತಿ ವರ್ಷ ಪುಷ್ಯ ಮಾಸದ ಬಹುಲ ಪಂಚಮೀ ದಿನ ( ಈ ವರ್ಷ 6-1-2018 ಶನಿವಾರ) ಅವರ ಸಮಾಧಿ ಸನ್ನಿಧಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಿರಿಯ-ಕಿರಿಯ ಗಾಯಕರು ಅವರ ಕೃತಿಗಳನ್ನು ಒಕ್ಕೊರಳಿನಲ್ಲಿ ಹಾಡಿ ನಾದನಮನ ಸಲ್ಲಿಸುತ್ತಾರೆ.  ಅವರು ಶ್ರೀರಾಮನನ್ನು ಮೋಕ್ಷವನ್ನು ಕರುಣಿಸು ಎಂದು ಪ್ರಾರ್ಥಿಸಿದಾಗ, ಅದು ಮುಂದಿನ ಜನ್ಮದಲ್ಲಿ ಆದೀತು ಎಂದನಂತೆ ಶ್ರೀರಾಮ! ಆಗ ಅವರು ಆತುರ ಸನ್ಯಾಸ ಸ್ವೀಕರಿಸಿ, ಇನ್ನೊಂದು ಜನ್ಮ ಬಂದಿತೆಂದು ಭಾವಿಸಿ, 1847ರಲ್ಲಿ ಪುಷ್ಯ ಬಹುಲ ಪಂಚಮೀ ದಿನ ಪಾರ್ಥಿವ ಶರೀರವನ್ನು ತ್ಯಜಿಸಿ, ಯತಿಗಳಂತೆ ವೃಂದಾವನ ಪ್ರವೇಶ ಮಾಡಿದರಂತೆ.Sri Gopala Dasaru
ಶ್ರೀ ಗೋಪಾಲದಾಸರು ಆರಾಧನಾ ಸ್ಮರಣೆ
ಪುಷ್ಯ ಬಹುಳ ಅಷ್ಟಮೀ (9ನೇ ಜನವರಿ )

ಕರ್ನಾಟಕ ಹರಿದಾಸ ಪರಂಪರೆಯಲ್ಲಿ ಶ್ರೀ ಪುರಂದರ ದಾಸರ ನಂತರ ಗೋಪಾಲ ದಾಸರು ಮಾನ್ಯರಾಗಿದ್ದಾರೆ, ಅವರು ಹಲವು ಹರಿದಾಸರಿಗೆ ಮಾರ್ಗದರ್ಶಕರೂ ಹೌದು. ಇವರನ್ನು ’ಭಕ್ತಿಯಲಿ ಭಾಗಣ್ಣ’ಎಂದೇ ಸ್ಮರಿಸಲಾಗುತ್ತದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮೊಸರುಕಲ್ಲು ಎಂಬ ಗ್ರಾಮದಲ್ಲಿ ಇವರು 1722ರಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ತಂದೆ, ಇದ್ದ ಆಸ್ತಿ ಎಲ್ಲವನ್ನೂ ಕಳೆದುಕೊಂಡ ಭಾಗಣ್ಣನವರು ವಿಧವೆ ತಾಯೊಯೊಡನೆ ಊರೂರು ಅಲೆಯುವ ಸ್ಥಿತಿಗೆ ಬಂದರು.
ಭಾಗಣ್ಣನ ತಾಯಿ ವೆಂಕಮ್ಮನವರು ಇದ್ದ ಅತಿಸಣ್ಣ ಜಮೀನಿನಲ್ಲಿ ಬೇಸಾಯ ಮಾಡಿಕೊಂಡು, ಅವರಿವರ ಕೆಲಸ ಮಾಡಿಕೊಡುತ್ತಾ ಹೊಟ್ಟೆ ಹೊರೆದು ಮಗನನ್ನು ಸಾಕುವ ಪರಿಸ್ಥಿತಿ ಒದಗಿತು. ಆಗ ಅವರಿಗೆ ಅಕ್ಷರ ವಿದ್ಯೆಯೂ ಆ ಕುಗ್ರಾಮದಲ್ಲಿ ಸುಲಭವಾಗಿ ದೊರೆಯುವಂತಿರಲಿಲ್ಲ. ತಾಯಿ ಯಾರನ್ನೋ ಗೋಗರೆದು ಮಗನಿಗೆ ಅಕ್ಷರಾಭ್ಯಾಸ, ಉಪನಯನಗಳನ್ನು ಮಾಡಿಸಬೇಕಾಯಿತು. ಸುಂಕಾಪುರದ ಶ್ಯಾನುಭೋಗ ಗುಂಡಪ್ಪನವರು ಧರ್ಮೋಪನಯನವನ್ನು ಮಾಡಿಸಿದರು.
ಭಾಗಣ್ಣನವರಿಗೆ ಚಿಕ್ಕ ವಯಸ್ಸಿನಲ್ಲಿಯೇ ವಾಕ್ಸಿದ್ಧಿ ಎಂದರೆ ಅವರು ಆಡಿದ್ದೆಲ್ಲಾ ನಿಜವಾಗುವ ಧೀ ಶಕ್ತಿಯು ಗಾಯತ್ರೀ ಮಹಾಮಂತ್ರದ ಸತತ ಜಪದ ಬಲದಿಂದ ಒಲಿದಿತ್ತು.  ದಿನೇ ದಿನೇ ಭಾಗಣ್ಣನವರ ತಪಸ್ಸಿದ್ಧಿ ಸುತ್ತಮುತ್ತಲೂ ಪ್ರಸಿದ್ಧಿ ಗಳಿಸಿತು. ಆಗ ಆ ಗದ್ವಾಲ ಪ್ರಾಂತದ ರಾಜಾರಾಮ ( ರೆಡ್ಡಿ) ಭೂಪಾಲನಿಗೆ ಈ ಸುದ್ದಿ ಮುಟ್ಟಿತು. ಆತ ಕೂಡಲೇ ಪರಿವಾರ ಸಮೇತನಾಗಿ ಭಾಗಣ್ಣನವರಿದ್ದ ಕುಗ್ರಾಮಕ್ಕೆ ಬಂದೇ ಬಿಟ್ಟ. ರಾಜನು ಅಲ್ಲಿನ ಗ್ರಾಮಾಧಿಕರಿಗಳನ್ನು ನೋಡುವ ಮುನ್ನವೇ ಭಾಗಣ್ನನವರ ಭೇಟಿಯನ್ನು ಬಯಸಿದ. ಅವರ ಅನೇಕ ಪವಾಡ ಸದ್ರುಶ ಸಾಧನೆಗಳನ್ನು ಜನರು ಆಗಲೇ ಆತನಿಗೆ ವರದಿ ಒಪ್ಪಿಸಿದ್ದರು.
ಜಾಣನಾದ ಈ ಹುಡುಗನ ಸೋದರರಿಗೆ  ರಾಜನ ದರಬಾರಿನಲ್ಲಿ ನೌಕರಿಯೂ ಸುಲಭವಾಗಿ ದೊರೆಯಿತು, ಬಡತನ ತುಸುಮಟ್ಟಿಗೆ ಕಳೆದಿತ್ತು. ಆದರೆ ಅಲ್ಲಿದ್ದ ಕೆಲವು ಅಸೂಯಾಪರ ಮಂದಿ ಆತನ ಸೋದರರ ಮೇಲೆ ಬಡವರಾದ ಕಾರಣ ಕಳ್ಲತನದ ಆರೋಪವನ್ನು ಹೊರಿಸಿ, ಜೈಲಿಗಟ್ಟಿದರು. ಭಾಗಣ್ಣನವರಿಗೆ ಇದು ಗೊತ್ತಾಗಿ, ಅವರನ್ನು ಸೆರೆಮನೆಯಿಂದ ಬಿಡಿಸಿಕೊಂಡು ಬಂದರು. ಆನಂತರ ಭಾಗಣ್ಣನೇ ಆದವಾನಿಯ ದಿವಾನರಾಗಿದ್ದ ತಿಮ್ಮಣ್ಣಯನವರ ಬಳಿ ಉದ್ಯೋಗಕ್ಕೆ ಸೇರಿದರು. ಈಗಾಗಲೇ ಅವರಿಗೆ ಗಾಯತ್ರೀ ಮಂತ್ರಸಿದ್ಧಿಯ ಪ್ರಭಾವದಿಂದ ಜ್ಯೋತಿಷ್ಯ ವಿದ್ಯೆ ಕರಗತವಾಗಿ ಸಾಕಷ್ಟು ಹೆಸರು ಬಂದಿತ್ತು.
ಇದೇ ಕಾರಣ ಅವರಿಗೆ ಆಗ ದುರ್ಲಭವೆನಿಸಿದ್ದ ಕಾಶೀ ಯಾತ್ರೆಯೂ ಆಯಿತು. ಆಗ ಅಲ್ಲಿ ಅವರಿಗೆ ಸೌಭಾಗ್ಯದಿಂದ ಶ್ರೀವಿಜಯದಾಸರ ಭೇಟಿಯಾಯಿತು. ಅಷ್ಟು ಹೊತ್ತಿಗೆ ಈ ರಾಜಕೀಯದ ನೆರಳೂ, ಲೌಕಿಕ ಜೀವನವೂ ಅವರಿಗೆ ಸಾಕಷ್ಟು ಬೇಸರ ತಂದಿತ್ತು. ಇದನ್ನರಿತ ವಿಜಯದಾಸರು ಈತನನ್ನು ಶಿಷ್ಯನಾಗಿ ಸ್ವೀಕರಿಸಿ, ’ ಗೋಪಾಲ ವಿಟ್ಠಲ” ಎಂಬ ಅಂಕಿತವನ್ನು ನೀಡಿ ಅನುಗ್ರಹಿಸಿದರು. ಭಾಗಣ್ಣ ಗೋಪಾಲದಾಸರಾದರು.
ಊರಿಗೆ ಮರಳಿದ ದಾಸರು ಜನಸೇವೆ, ಭಗವನ್ನಾಮ ಸ್ಮರಣೆ, ಬೇಡಿ ಬಂದವರಿಗೆ ಅವರಿಗೆ ಬೇಕಾದ ಸಹಾಯ ಮಾಡುವುದರಲ್ಲಿ ಮಗ್ನರಾದರು. ಆಗ ಭೇಟಿಯಾದದ್ದು ಒಬ್ಬ ಮಹಾನ್ ವಿದ್ವಾಂಸರಾದ ಆಯಿಜೀ ವೆಂಕಟರಾಮಾಚಾರ್ಯರು. ಅವರಿಗೆ ತಾಳ ತಂಬೂರಿ ಹಿಡಿದು, ತಿರಿದು ತಿನ್ನುವ ದಾಸರಲ್ಲಿ ಸಹಜವಾಗಿಯೇ ತಾತ್ಸಾರವಿತ್ತು.ಆದರೆ ಆಚಾರ್ಯರ ಪತ್ನಿಗೆ ಶ್ರೀ ಗೋಪಾಲದಾಸರ ಹಿರಿಮೆ ಆಗಲೇ ತಿಳಿದಿತ್ತು. ಅವರು ಪ್ರತಿನಿತ್ಯವೂ ಗೋಪಾಲದಾಸರ ’ ವಗತನದಲಿ ಸುಖವಿಲ್ಲ| ಅದು ವಲ್ಲೆನೆಂದರೆ ಬಿಡದಲ್ಲ|| ಎಂಬ ಹಾಡನ್ನು ತಪ್ಪದೆ ಹಾಡುತ್ತಿದ್ದರು. ಒಮ್ಮೆ ಅಚಾರ್ಯರಿಗೆ ಅದನ್ನು ಮತ್ತೊಮ್ಮೆ ಹಾಡು ಎಂದು ಮೂರು ಬಾರಿ ಹಾಡಿಸಿ, ಆ ನುಡಿಗಳ ತತ್ತ್ವಾರ್ಥಕ್ಕೆ ಮನಸೋತರು. 
ಆಯಿಜೀ ವೆಂಕಟರಾಮಾಚಾರ್ಯರು ಪ್ರಕಾಂಡ ಪಂಡಿತರಾಗಿ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಯತಿಗಳಾದರು. ಆದರೆ ಪೀಠವನ್ನೇರಲಿಲ್ಲ. ಅವರು ’ ಶ್ರೀ ಶ್ರೀ ವ್ಯಾಸ ತತ್ವಜ್ಞ’ ರಾದರು. ತಾವೂ ಅನೇಕ ದೇವರನಾಮಗಳನ್ನು ರಚಿಸಿ, ಮಂತ್ರಾಲಯದ ಹತ್ತಿರದ ತುಂಗಭದ್ರಾ ತೀರದಲ್ಲಿನ ವೇಣೀಸೋಮಪುರದಲ್ಲಿ ನೆಲೆಸಿ, ಅಲ್ಲಿಯೇ  ವ್ರುಂದಾವನಸ್ಥರಾದರು.
ಶ್ರೀ ಗೋಪಾಲ ದಾಸರು ತಿರುಪತಿ, ಉಡುಪಿ, ಬದರಿ, ರಾಮೇಶ್ವರಗಳನ್ನು ತೀರ್ಥಯಾತ್ರೆಯ ವೇಳಿ ಸಂದರ್ಶಿಸಿದ್ದರೂ, ಪಂಢರಾಪುರಕ್ಕೆ ಯಾವ ಕಾರಣವೋ ಭೇಟಿ ನೀಡಿರಲಿಲ್ಲ. ಒಮ್ಮೆ ದಾಸರು ದೇವತಾರ್ಚನೆಗೆಂದು ನಸುಕಿನಲ್ಲಿಯೇ  ತುಲಸೀ ಸಂಗ್ರಹ ಮಾಡಲು ಪಕ್ಕದ ಅಡವಿಗೆ ಹೋಗಿದ್ದರು. ಅವರ ಹಿಂದೆಯೇ ಕುದುರೆ ಸವಾರನೊಬ್ಬನು ಹಿಂಬಾಲಿಸಿದ್ದನ್ನು ಕಂಡು: ನಾನೇನು ಮಾಡಿದೆನಯ್ಯಾ ನಿನಗೆ?” ಎಂದು ಸಹಜವಾಗಿಯೇ ಕೇಳಿದರು. ದಾಸರು ಅಲ್ಲಿಯೇ ನಿಂತು ’ಏನು ಮಾಡುತೀಯೋ ಮಾಡು’ ಎಂದುಬಿಟ್ಟರು. ಆ ಸವಾರನು ಏನೂ ಮಾಡಲಿಲ್ಲ, ಆದರೆ ’ ಅಲೇನಾಹಿ’- ಬರುವುದಿಲ್ಲವೇನೋ? ಎಂದು ಮರಾಠಿ ಭಾಷೆಯಲ್ಲಿ ಹೇಳಿ ಮುಂದೆ ಸಾಗಿ ಕಣ್ಮರೆಯಾದ. ದಾಸರು ತಮ್ಮ ಯೋಗಸಿದ್ಧಿಯಿಂದ ಆ ಸವಾರ ತಾವು ಇದುವರೆಗೂ ದರ್ಶನ ಮಾಡದಿದ್ದ ಪಾಂಡುರಂಗ ವಿಟ್ಠಲನೇ ಸರಿ ಎಂದು ಖಚಿತವಾಯಿತು.
ಆ ಸಂದರ್ಭದಲ್ಲಿ ಅವರಿಗಾದ ದಿವ್ಯ ದರ್ಶನವನ್ನು ಸುಳಾದಿ ರೂಪದಲ್ಲಿ ದಾಸರು ರಚಿಸಿದ್ದಾರೆ:
ನೀಲಕುದುರೆಯನೇರಿ ಶಾಲು ಟೊಂಕಕೆ ಸುತ್ತಿ |
ಕಾಲು ಕುಪ್ಪುಸ ತೊಟ್ಟು ಮ್ಯಾಲೆ ಮೋಹನ್ನ ಹಾಕಿ|
ತೋಳುತಾಯಿತ ಶಿರಕೆ ಮೇಲಾದ ವಸ್ತ್ರ ಸುತ್ತಿ|
ಫಾಲ ಕಸ್ತೂರಿಯನಿಟ್ಟು ಮೈಗೆ ಗಂಧವ ಪೂಸಿ |
ಪಲಾಯನದಿ ಅಶ್ವವೇರಿ ಹಾರಾಡಿಸುತ್ತ |
ಅಲೇನಾಹೀ ಎಂದು ಕೇಳಿದನಾರಯ್ಯ||
ಮಾಲೆ ಪರಿಮಳ ಗಂಧ ಕುರುಹಿಂದ |
ಶೀಲಮೂರುತಿ ಪಂಢರಿಯ ಗೋಪಾಲ ವಿಟ್ಠಲಾ |
ಓಲಾಡಿಸುತ್ತಾ ಕುದುರಿ ಓಲಾಡಿ ಪೋದನೆಂದು ||
ಈ ದಿವ್ಯ ದ್ರುಶ್ಯವನ್ನು ನೋಡಿದ ದಾಸರು ಕೂಡಲೇ ವಿಠಲನ ದರ್ಶನಕ್ಕೆಂದು ಪಂಢರಾಪುರಕ್ಕೆ ತೆರಳಿದರು.
ಗೋಪಾಲದಾಸರ ಸುಳಾದಿಗಳ ಸಂದೇಶ ಬಹು ಅರ್ಥಗರ್ಭಿತವಾಗಿದೆ:
ಮಡಿಯ ಬಗ್ಗೆ ದಾಸರ ಮಾತನ್ನು ಕೇಳೋಣ:
ಮಡುವಿನೊಳಗಿದ್ದ ಕರಿರಾಜನ ನೋಡು| ಕಡುಛಲ ಭಕುತ ಪ್ರಹ್ಲಾದನ್ನ ನೋಡು|
ಅಡವಿಯ ಸೇರಿದ ಧ್ರುವರಾಯನ ನೋಡು| ಕಡು ಪಾತಕಿ ಅಜಮಿಳನನ್ನು ನೀನೇ ನೋಡು|
ಎಡೆಯ ಕೊಂಡೋಡಿದ ಹನುಮನ ನೋಡು| ಕಡೆಮೊದಲಿಲ್ಲದ ಮುನಿಗಳ ನೋಡು|
ಕಡಲಶಯನ ಗೋಪಾಲ ವಿಟ್ಠಲನಾಮ | ನುಡಿದರಲ್ಲದೆ ಮಡಿ ಮಾಡಿ ದಣಿದರೆ? ||
ಶ್ರೀ ಗೋಪಾಲದಾಸರು ತಮ್ಮ ಆಯುಷ್ಯದ ೪೦ ವರ್ಷಗಳನ್ನು ಜಗನ್ನಾಥದಾಸರಿಗೆ, ವಿಜಯದಾಸರ ಆದೇಶದಂತೆ ದಾನ ಮಾಡಿದ ಮೇಲೆ ಕಡೆಯ ಬಾರಿ ತಿರುಪತಿ ಶ್ರೀನಿವಾಸನ ದರ್ಶನ ಪಡೆದರು:
ಪೋಗುವೆನು ಬರಲಾರೆ ಶ್ರೀಶಾ ಮರಳಿ ಇಲ್ಲಿ|
ನಾಗಶಯನ ಈಶ ಶ್ರೀಶಾ ||
ಎಂದು ಪ್ರಾರ್ಥಿಸಿ ತಮ್ಮ ಗ್ರಾಮ ಉತ್ತನೂರಿಗೆ ವಾಪಸಾದರು. ಅಲ್ಲಿ ಧ್ಯಾನಾಸಕ್ತರಾಗಿ, ಚಿತ್ರಭಾನು ಸಂವತ್ಸರದ ಪುಷ್ಯ ಬಹುಳ ಅಷ್ಟಮೀ ದಿವಸ ( 1762)  ಅಲ್ಲಿನ ವೆಂಕಟೇಶ ದೇವಾಲಯದಲ್ಲಿ
ಮಂಗಳಂ ದಯಾನಿಧೇ ಮಂಗಳಂ ಮಂಗಳಂ ದಯಾನಿಧೇ |
ನಂದನಂದನ ಶ್ಯಾಮಸುಂದರ ಶುಭಕಾಯ
ಇಂದೀವರಾಕ್ಷ ಮುಕುಂದ ಮುರಾರೇ ಮಂಗಳಂ ||
ದೇವದೇವೇಶನೆ ದೇಹಿ ಕಲ್ಯಾಣಂ
ಶ್ರೀವರ ಶ್ರೀಕರ ಶ್ರೀ ನಿವಾಸಾ| ಮಂಗಳಂ
ರಾಜಿತವರದ ಗೋಪಾಲ ವಿಟ್ಠಲ ಮಹಾ|
ರಾಜ  ಭಕುತಕಲ್ಪಭೂಜ ಸುತೇಜಾ | ಮಂಗಳಂ||
ಎಂದು ಹಾಡುತ್ತಲೇ ಶ್ವಾಸ ನಿಗ್ರಹಮಾಡಿ ದೇಹತ್ಯಾಗ ಮಾಡಿದರು. ಇಂದಿಗೂ ಹರಿದಾಸರು ಪ್ರತಿ ವರ್ಷ ಪುಷ್ಯ ಬಹುಳ ಅಷ್ಟಮೀ ಶ್ರೀ ಗೋಪಾಲದಾಸರ ಆರಾಧನೆಯನ್ನು ನಡೆಸುತ್ತಾರೆ.
( ಈ ವರ್ಷ ದಾಸರ ಆರಾಧನೆಯು ಜನವರಿ ೯, ಮಂಗಳವಾರ ನಡೆಯುತ್ತದೆ)


Friday, December 22, 2017

Sri Narahari Tirtha

ಶ್ರೀ   ನರಹರಿ ತೀರ್ಥರು (1324-33)
ಶ್ರೀಮಧ್ವಾಚಾರ್ಯರ ಮೊದಲ ಸಾಲಿನ ಶಿಷ್ಯರಲ್ಲಿ ಶ್ರೀ ನರಹರಿ (  ನರಸಿಂಹ) ತೀರ್ಥರು ಪ್ರಮುಖರು. ಅವರ ಬಗ್ಗೆ ಆಚಾರ್ಯರ ಜೀವನ ಗಾಥೆಯಾದ ಶ್ರೀಮಧ್ವ ವಿಜಯದಲ್ಲಿ ನೇರವಾಗಿ ಯಾವ ಪ್ರಸ್ತಾಪವೂ ಕಾಣುವುದುದಿಲ್ಲ. ಆದರೆ ಉಡುಪಿಯ ಆಷ್ಟ ಮಠಾಧೀಶರ ಬಗ್ಗೆ ಪಟ್ಟಿ ಮಾಡುವಾಗ ನಾರಾಯಣ ಪಂಡಿತಾಚಾರ್ಯರು, ನರಸಿಂಹಪಾದದಾಧಾರಾಃ.... ಎಂದು ಉಲ್ಲೇಖಿಸುತ್ತಾರೆ. ಈಗಿನ ಅಡಮಾರು ಮಠಕ್ಕೆ ಮೂಲ ಪುರುಷರು ನರಸಿಂಹ ತೀರ್ಥರೂ, ಇವರೇ ಪ್ರಸಿದ್ಧರಾದ ನರಹರಿ  ತೀರ್ಥರೂ ಆಗಿದ್ದರು.
ಶ್ರೀ ನರಹರಿ ತೀರ್ಥರು ಓಡಿಸ್ಸಾ  ಪ್ರದೇಶದಿಂದ ಬಂದವರು. ರಾಜಕಾರಣ, ಪಾಂಡಿತ್ಯ ಆಡಳಿತ ಸಾಮರ್ಥ್ಯ ಎಲ್ಲವನ್ನೂ ಹೊಂದಿದ್ದ ಅಪರೂಪದ ವ್ಯಕ್ತಿತ್ವ ಅವರದಾಗಿತ್ತು.
ಉಡುಪಿಯ ಆಷ್ಟ ಮಠಗಳ ಮೂಲ ಯತಿಗಳನ್ನು ಸ್ಮರಿಸುವ ಶ್ಲೋಕ ಹೇಗಿದೆ:
ವಂದೇ ಹೃಷೀಕೇಶಮಥೋ ನೃಸಿಂಹಮ್
ಜನಾರ್ದನಂ ಚಿಂತಯ ಧೀರುಪೇಂದ್ರಮ್ |
ಶ್ರೀವಾಮನಂ ಸಂಸ್ಮರ ವಿಷ್ಣುಮೇಮಿ
ಶ್ರೀರಾಮಮಂಚೇ&ಹಮಧೋಕ್ಷಜಮ್ ಚ ||
ಈ ಶ್ಲೋಕದಲ್ಲಿ ಎಂಟು ಮತಗಳ ಮೂಲ ಯತಿಗಳನ್ನೂ ಸ್ಮರಿಸಲಾಗಿದೆ. ಹಾಗೆ ನೋಡಿದರೆ, ಹೃಷೀಕೇಶ ತೀರ್ಥರ ನಂತರ ಉಡುಪಿ ಪರಂಪರೆಯಲ್ಲಿ ಬಂದ ಎರಡನೆಯ ಯತಿ ನರಹರಿ ತೀರ್ಥರೂ. ಇವರನ್ನು ಯಕ್ಷಗಾನ ಕಲೆಯ ಪ್ರವರ್ತಕರು ಎಂದೂ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಈಗಲೂ ಯಕ್ಷಗಾನ ಕಲಾವಿದರು ತಮ್ಮ ಹಣೆಯಲ್ಲಿ ಧರಿಸುವ ತಿಲಕ ಮಾಧ್ವರ ಅಂಗಾರ-ಅಕ್ಷತೆಯನ್ನು ಅನುಕರಿಸುತ್ತದೆ ಎನ್ನುವುದು ಗಮನಾರ್ಹವಾಗಿದೆ.
ನರಸಿಂಹಪಾದಾಧಾರಾಃ ಎನ್ನುವ ಶಬ್ದಕ್ಕೆ ಸ್ವಯಂ ನಾರಾಯಣ ಪಂಡಿತರೇ ಭಾವಪ್ರಕಾಶಿಕೆಯಲ್ಲಿ ನರಹರಿ ತೀರ್ಥಾಃ ಎಂದು ವಿವರಿಸುತ್ತಾರೆ. ಹೀಗಾಗಿ ನರಸಿಂಹ ತೀರ್ಥರೆ ನರಹರಿ ತೀರ್ಥರು ಎಂದು ಸ್ಪಷ್ಟವಾಯಿತು. ಹಾಗಾದರೆ, ಅವರು ಉಡುಪಿಯ ಇತರೆ ಯತಿಗಳಂತೆ ಬಾಲ ಸನ್ಯಾಸಿಗಳೇ ಗೃಹಸ್ಥರೇ ಎಂಬ ಪ್ರಶ್ನೆ ಬರುತ್ತದೆ. ಈ ಮೇಲಿನ ಶ್ಲೋಕದಂತೆ ಮೊದಲು ಅವರು ಉಡುಪಿಯ ಅದಮಾರು ಮಠದ ಮೂಲ ಪುರುಷರಾಗಿದ್ದು, ಶ್ರೀಮದಾಚಾರ್ಯರ ಆದೇಶದಂತೆ ಕಲಿಂಗ ದೇಶಕ್ಕೆ ತೆರಳಿ ತಮ್ಮ ತಂದೆಯಂತೆ ತಾವೂ  ( ಪಿತ್ರಾಚಾರಮುಪೈತಿ ಸೂನುರಿತಿ ಸನ್ನೀತಿಸ್ಥಿತೋ ಧರ್ಮತಃ) ಅಲ್ಲಿನ ರಾಜರಿಗೆ ಸಲಹೆಗಾರರಾಗಿದ್ದಿರಬಹುದು. ಈ ಬಗ್ಗೆ ಶ್ರೀಕೂರ್ಮಮ್ ಶಿಲಾ ಶಾಸನದಲ್ಲಿ 1285ರಲ್ಲಿ ಪ್ರಸ್ತಾಪವಿದೆ.
ಕಲಿಂಗ ರಾಜ್ಯದ ದೊರೆ ಮೊದಲ ನರಸಿಂಹ 1264ರಲ್ಲಿ  ಮೃತನಾದಾಗ, ಅಲ್ಲಿನ ರಾಣಿ ಗರ್ಭಿಣಿಯಾಗಿದ್ದು, ಆಕೆ ಶಿಶುವನ್ನು ಪ್ರಸವಿಸುವವರೆಗೆ ಆ ರಾಜ್ಯದ ಆಡಳಿತದ ಹೊಣೆಯನ್ನು ನರಹರಿ ತೀರ್ಥರು  ಹೊತ್ತು, ಆಚಾರ್ಯರ ಆದೇಶದಂತೆ ಅಲ್ಲಿಗೆ ತೆರಳುವ ಮೊದಲು ಕಮಲೇಕ್ಷಣ ತೀರ್ಥರನ್ನು ಅದಮಾರು ಮಠದ ಪೀಠಾಧಿಪತಿಯನ್ನಾಗಿ ನೇಮಿಸಿದರು. 1279ನೇ ಇಸವಿಯ ಮುನ್ನವೇ ಅವರು ಸನ್ಯಾಸ ಸ್ವೀಕರಿಸಿದ್ದರು. ಆ ನಂತರ ರಾಜ್ಯದ ರಕ್ಷಣೆಗಾಗಿ ಅಲ್ಲಿಗೆ ತೆರಳಿ, ತಮ್ಮ ಕರ್ತವ್ಯವನ್ನು ನಿರ್ವಹಿಸಿ, ಅಲ್ಲಿನ ಯುವರಾಜ ಪ್ರಾಪ್ತ ವಯಸ್ಕನಾದ ನಂತರ ಉದುಪಿಗೆ ಹಿಂದಿರುಗಿದರು. ಅಲ್ಲಿಂದ ಮರಳಿ ಬರುವಾಗ ಆ ಗಜಪತಿ ರಾಜನ ಕೋಶದಲ್ಲಿದ್ದ ಪುರಾತನ ಬ್ರಹ್ಮ ಕರಾರ್ಚಿತ ಎಂದು ಪ್ರಸಿದ್ಧವಾದ ಮೂಲರಾಮ, ಸೀತಾದೇವಿಯರ ಪ್ರತಿಮೆಗಳನ್ನು ತಂದು ಕ್ರಿ.ಶ. 1293ರಲ್ಲಿ  ಶ್ರೀಮದಾಚಾರ್ಯರಿಗೆ ಒಪ್ಪಿಸಿದರು.
ಆಚಾರ್ಯ ಮಧ್ವರು ಈ ಪ್ರತಿಮೆಗಳನ್ನು ಹಲವು ದಿನಗಳು ಪೂಜಿಸಿ, ಬದರಿಗೆ ತೆರಳುವ ಮೊದಲು ಶ್ರೀ ಪದ್ಮನಾಭ ತೀರ್ಥರ ವಶಕ್ಕೆ ಒಪ್ಪಿಸಿದರು. ಇದು ಪರಂಪರಾನುಗತವಾಗಿ ಘಟ್ಟದ ಮೇಲಿನ ಮಠಗಳಲ್ಲಿ ಮೂಲ ಪ್ರತಿಮೆಯಾಗಿತ್ತು. ಈ ಬಗ್ಗೆ ಇದ್ದ, ಇರುವ ವಿವಾದ ಇಲ್ಲಿ ಅನಗತ್ಯ.
ನರಹರಿ ತೀರ್ಥರು ಸ್ವಯಂ ಸಂಗೀತಾಸಕ್ತರೂ ಆಗಿದ್ದರು. ಒಂದೆರಡು ದೇವರ ನಾಮಗಳೂ ಅವರ ಹೆಸರಿನಲ್ಲಿ ದಾಖಲಾಗಿದೆ.
ಶ್ರೀ ನರಹರಿ ತೀರ್ಥರು ಶ್ರೀಮಧ್ವರ ಹಲವು ಗ್ರಂಥಗಳಿಗೆ ಟೀಕೆ ಬರೆದಿದ್ದಾರೆ. ಅವರು ಬರೆದ ಯಮಕಭಾರತ ಟೀಕೆ ಶ್ರೀಕೃಷ್ಣಪ್ರಕಾಶಿಕಾ  ತುಂಬಾ ಸುಂದರವಾಗಿದೆ. ನರಹರಿ ತೀರ್ಥರ ರಚಿತ ಇತರೆ ಟೀಕಾ ಗ್ರಂಥಗಳು:
1.      ಗೀತಾಭಾಷ್ಯ ಭಾವಪ್ರಕಾಶಿಕಾ
2.     ವಿಷ್ಣುತತ್ತ್ವವಿನಿರ್ಣಯ ಟೀಕಾ
3.     ಕರ್ಮನಿರ್ಣಯ ಟೀಕಾ
4.    ಬ್ರಹ್ಮಸೂತ್ರ ಭಾಷ್ಯ ಭಾವಪ್ರಕಾಶಿಕಾ
5.     ಶ್ರೀಕೃಷ್ಣಪ್ರಕಾಶಿಕಾ
ಇವುಗಳಲ್ಲಿ ಯಮಕಭಾರತ ಟೀಕಾ ( ಶ್ರೀಕೃಷ್ಣ ಪ್ರಕಾಶಿಕಾ)  ಮಾತ್ರ ಮುದ್ರಿತವಾಗಿದ್ದು, ಉಳಿದವು ಶ್ರೀ ಜಯತೀರ್ಥರೇ ಮೊದಲಾದ ಟೀಕಾಕಾರರಿಂದ ಉಲ್ಲೇಖಿತವಾಗಿದೆ.
ನರಹರಿ ತೀರ್ಥರ ಶ್ರೀಕೂರ್ಮದ ಶಾಸನ ದೊರೆಯುವವರೆಗೆ ಅವರ ಬಗ್ಗೆ ಅನೇಕ ವಿಷಯಗಳು ಪ್ರಕಟವಾಗಿಯೇ ಇರಲಿಲ್ಲ. ಅವರಿಗೆ ಸನ್ಯಾಸ ದೀಕ್ಷೆ ದೊರೆತಾಗ ಅವರ ವಯಸ್ಸು 22-25 ಇರಬಹುದು. ಅವರ ಹೆಸರನ್ನು ಉಲ್ಲೇಖಿಸಿವ 9 ಶಿಲಾ ಶಾಸನಗಳು ಶ್ರೀ ಕೂರ್ಮಮ್, ಸಿಂಹಾಚಲಮ್ ಮೊದಲಾದ ಕಡೆ ದೊರೆತಿವೆ.
ಒಡ್ಡವಾಡಿಯ ಮತ್ಸ್ಯ ವಂಶದ ದೊರೆಗಳು ಇವರ ಪ್ರಭಾವಕ್ಕೊಳಗಾಗಿ ವೈಷ್ಣವರಾದರು. ಇವರಲ್ಲಿ ಅರ್ಜುನ ನರಸಿಂಹ ವರ್ಧನ ದೊರೆಯಾದ, ಅನ್ನಮರಾಜ ಗೋಪಾಲವರ್ಧನನಾದ. ಮುಂಜಾದಿತ್ಯ ಶ್ರೀರಂಗವರ್ಧನ ಎನಿಸಿದ. ಕಳಿಂಗ ಹಾಗೂ ಆಂಧ್ರದೇಶದ ಹಲವು ರಾಜರು, ಸಾಮಂತರು, ಸಾಮಾನ್ಯರು ಆಗ ವೈಷ್ಣವ ದೀಕ್ಷೆಯನ್ನು ಸ್ವೀಕರಿಸಿದರು. ಎರಡನೆಯ ನರಸಿಂಹನ ಕಾಲದಲ್ಲೂ ಅವರು ಕ್ರಿಯಾಶೀಲರಾಗಿದ್ದರು. ಮಧ್ವಮತ ಪ್ರಸಾರಕ್ಕಾಗಿ ಸಿಂಹಾಚಲಂ ನಲ್ಲಿ ಮಠವೊಂದನ್ನು ಸ್ಥಾಪಿಸಿದ್ದರು.  ಅಲ್ಲಿ 1373ರ ವರೆಗೂ ಮಠವೊಂದು ಅಸ್ತಿತ್ವದಲ್ಲಿತ್ತು, ಶ್ರೀ ಜಗನ್ನಾಥ ತೀರ್ಥರು ಅಲ್ಲಿ ನರಹರಿ ತೀರ್ಥ ಸಂಸ್ಥಾನದ ಯತಿಗಳಾಗಿದ್ದರು ಎಂದು ಸಿಂಹಾಚಲಮ್ ದೇವಸ್ಥಾನದ ಬಗ್ಗೆ ಡಾ| ಸುಂದರಂ ಅವರು ಬರೆದ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ. ಅದು ಉಚ್ಛ್ರಾಯ ಸ್ಥಿತಿಯಲ್ಲಿದ್ದು,  ಒಂದೆರಡು ಪೀಳಿಗೆಯ ನಂತರ ನಿಂತುಹೋಯಿತು ( ಡಾ| ಬಿಎನ್ ಕೆ ಶರ್ಮಾ ಅವರ ದ್ವೈತ ವೇದಾಂತದ ಇತಿಹಾಸ-ಸಾಹಿತ್ಯ ಪುಸ್ತಕ) .
ಶ್ರೀ ನರಹರಿ ತೀರ್ಥರು 1333ರಲ್ಲಿ ಹಂಪಿಯ ಬಳಿಯ ಚಕ್ರತೀರ್ಥದ ಹತ್ತಿರ ವೃಂದಾವನಸ್ಥರಾದರು. ( ಜನವರಿ 8 ಅವರ ಆರಾಧನೆ ಹಂಪಿಯಲ್ಲಿ ನಡೆಯಲಿದೆ)
-


Monday, October 30, 2017

Naming of Lakshminarayana yogi as Sripadaraja- a Fiction!!


There are more stories than historical facts about Madhva Saints, which have  been strangely respected by Matha fanatics. Accidentally I was browsing a Book published in 2009 to mark Sri SAtyatma Tirtha's Sanyasa Deeksha from his grand father Sri Satyaparomoda tirtha swamiji. the Book title reads: " Sripadaraja- Raghunatha Tirthara anyonya sambandha" 
No doubt both were contemporaries. Sri Raghunatha TIrtha was Parama  Guru of Sri Raghoottama Tirtha Swamiji of Uttaradi Matha. There is a Story in Madhwa circles that Sri Raghunatha Tirtharu was pleased with Nyayasudha discourse of young Lakshminarayana Yogi, a disciple of Sri Vibudhendra Tirtharu ( 1470) of now Sri Raghavendra Matha. 
While the date of Sri Raghunatha Tirtha ( 1502) , hitherto unknown as Granthakara , is  highly ridiculous & controversial as to who was elder or younger among the two, concocting a story that when he heard young Lakshminarayana Tirtha, successor of sri Svarnavana Tirtha, appreciated his scholarship and seemed to have said in Telugu, " Manam Sripadulaite meeru Sreepaadaraajulu". ( we are just called Sripadaru by virtue of Mathadhipatya but you are indeed King of Yatis" ...... later they are supposed to have travelled to Kashi together according to another Stotra  ascribed to Srinidhitirtha of Sripadaraja Matha, where he does not mention naming of Sripadarajaru by Raghunatha Tirtharu!!
but you excel. You are indeed, Sripadaraja. However, their tour to Ganga Snana is mentioned in this Stotra. Probably the story was spread in his days. 
This reportedly happened at Kopra Narasimha Kshetra. This story has prompted sri Mukkundi Sreekantacharya to write a Book, with introductory briefs by Prof KT Pandurangi, Dr Srinivasa Havanuru, and others. I strongly feel, instead of publishing a trash like this the Publishers could have published some unpublished book on Madhwa thought. 
While this booklet has 76 pages, only 37 pages are about the naming incident and supporting proofs thereon, which are all by later writers in Kannada on this. 

ಶ್ರೀರಘುನಾಥ ತೀರ್ಥರು ಹಾಗೂ ಶ್ರೀಶ್ರೀಪಾದರಾಜರ ಅನ್ಯೋನ್ಯ ಸಂಬಂಧ (2009) ) ಪುಸ್ತಕವನ್ನೋದಿ ನಮ್ಮ ಮಾಧ್ವ ವಿದ್ವಾಂಸರಲ್ಲಿ ಸಂಶೋಧನೆಯ ಬಗ್ಗೆ ಅತಿಕಡಿಮೆ ಗಮನವಿರುವುದು ತೀರಾ ಸ್ಪಷ್ಟವಾಗುತ್ತದೆ. ನಮಗೆ ಇಬ್ಬರೂ ಪೂಜ್ಯರೇ ಹೌದು. ನಾನೂ ಮುಳಬಾಗಿಲಿನಲ್ಲಿ ಹುಟ್ಟಿ ಈ ಕತೆಯನ್ನು ಹಲವಾರು ಬಾರಿ ಕೇಳಿ ಐತಿಹಾಸಿಕತೆ ಬಗ್ಗೆ ತಲೆಕೆಡಿಸಿಕೊಂಡು " ಅವರೇನೋ ಬರಕೋತಾರೆ, ಅದು ಮಠದ ಋಣ, ಅದಕ್ಕೆ ನೀನು ಯಾಕೆ ಒದ್ಯಾಡುತ್ತಿ? ಎಂದು ತಂದೆಯಿಂದ ಹಗುರವಾಗಿ ಬೈಸಿಕೊಂಡೂ ಇದ್ದೇನೆ. 
 ಈ ಮೊದಲು ಪ| ಚಿಕ್ಕೆರೂರು ಗೋವಿಂದಾಚಾರ್ಯ, ಚೀ. ರಘುನಾಥಾಚಾರ್ಯ, ಈಗ ಮುಕ್ಕುಂದಿ ಶ್ರೀಕಾಂತಾಚಾರ್ಯರು ಈ ವಿಷಯದ ಬಗ್ಗೆ ಬರೆದಿದ್ದಾರೆ. 

. ಈ ಪುಸ್ತಕದ ೬೭ ಪುಟಗಳಲ್ಲಿ ವಿಷಯದ ಬಗ್ಗೆ ಇರುವುದುು. ೨೯-೬೭ರವರೆಗೆ ಮಾತ್ರ! ಉಳಿದಂತೆ ಶ್ರೀಪಾದರಾಜ ಮಠದ ಶ್ರೀಗಳ ಆಶೀರ್ವಚನದ ಹೊರತಾಗಿ ಹಲವು ವಿದ್ವಾಂಸರ, ಕುಂ ವ್ಯಾಸರಾಜ ಮಠದ, ಡಾ| ಶ್ರೀನಿವಾಸ ಹವನೂರ, ಪ್ರೊ| ಕೆಟಿ ಪಾಂಡುರಂಗಿಯವರ ಅನಿಸಿಕೆ, ಆಶೀರ್ವಾದ ವಚನಗಳಿವೆ! ಎಂದರೆ ಅದು ಆಗಿನ ಪೀಠಾಧಿಪತಿ ಶ್ರೀ ವಿಜ್ಞಾನನಿಧಿ ತೀರ್ಥರಿಗೂ ಸಮ್ಮತವಿರಲಿಲ್ಲ ಎಂದಾಯಿತು.  
 ಇಬ್ಬರು ಯತಿಗಳೂ ಸಮಕಾಲೀನರು ಎನ್ನುವ ಸಂದರ್ಭದ ಈ ಕತೆಗೆ ಪೂರಕವಾಗಿ ಶ್ರೀವ್ಯಾಸರಾಯರ ಪದದ ತುಣುಕೊಂದನ್ನೂ ಸೇರಿಸಲಾಗಿದೆ.
ಇದು ಹೀಗಿದೆ:
ಪರಮತಘನವನ ಪಾವಕನೆ 
ಶರಣು ಭೂಸುರನುತ ಸಿರಿ ನಾರಾಯಣ ಯೋಗಿ|
---------------------------------
ಸುರನಾಥಪುರಕಂದು ವರ ಪುಷ್ಪವಿಮಾನದಿ
ಸರಿಯುತಲಿರೆ ರಘುನಾಥೇನ್ದ್ರರ ವರ
ವೃಂದಾವನ ಪ್ರದಕ್ಷಿಣೆಯ್ಲೀಕ್ಷಿಸಿ ಕರೆದು ಭಾಷಿಸಿ
ಕಳುಹಿದಾಶ್ಚರ್ಯಚರಿತಾ|| 
ಈ ಕೃತಿ ಕೇವಲ ಎರಡು ಹಸ್ತಪ್ರತಿಗಳಲ್ಲಿ ಮಾತ್ರ ಲಭ್ಯ!!
ನನಗೆ ತಿಳಿದಂತೆ ಶ್ರೀಪಾದರಾಜರ ಲಾಲಿ ಹಾಡುಗಳು ಸುಪ್ರಸಿದ್ಧವಾಗಿ ಮನೆ ಮಾತಾಗಿದೆ. 

ಜೋ ಜೋ ಶ್ರೀರಂಗಧಾಮಾ .... ಮತ್ತು ಲಾಲಿ ಗೋವಿಂದ ಲಾಲಿ.. ಇಂದಿಗೂ ಕನ್ನಡಿಗರ ಮನೆಮಾತಾಗಿದೆ. ಇದುವರೆಗೂ ಗುಪ್ತವಾಗಿದ್ದ
" ತೂಗಿರೆ ರಾಮನ| ತೂಗಿರೆ ವ್ಯಾಸನ| ತೂಗಿರೊ ವಿಠಲನ್ನ| " ಈಗ ಪ್ರತ್ಯಕ್ಷವಾಗಿದೆ.
 ಡಾಹಿಂದೆ | ಶ್ರೀನಿವಾಸ ಹಾವನೂರರು ನಾನು ಉದಯವಾಣಿಯಲ್ಲಿದ್ದಾಗ, " ತೂಗಿರೆ ರಾಯರ| ತೂಗಿರೆ ಗುರುಗಳ" ಕೃತಿಯ ಬಗ್ಗೆ ಕಟುವಾಗಿ ಟೀಕಿಸಿ ಲೇಖನ ಬರೆದಿದ್ದರು. ಅವರೇ ಇದಕ್ಕೆ ತಮ್ಮ ಆಶೀರ್ವಚನದ ಅನಿಸಿಕೆಯನ್ನೂ ಬರೆದಿದ್ದಾರೆ.
ಈ ಕತೆ, ಉಲ್ಲೇಖ ಬಿಟ್ಟರೆ, ಶ್ರೀರಘುನಾಥ ತೀರ್ಥರ ಕೃತಿಗಳು, ಬದುಕು ಈ ಬಗ್ಗೆ ನನಗೆ ಕಾಣಿಸಲಿಲ್ಲ. ಶ್ರೀಪಾದರಾಜರು ತಮಿಳುನಾಡಿನ ಶಿವಗಂಗದಲ್ಲಿ ಜನಿಸಿ, ತಮ್ಮ ದೊಡ್ದಮ್ಮನ ಮಗ ಬ್ರಹ್ಮಣ್ಯ ತೀರ್ಥರೊಡನೆ ಅಬ್ಬೂರಿನ  ಕಣ್ವ ನದೀತೀರಕ್ಕೆ  ಅಭಿಪ್ರಾಯವಾಗಿದೆ. ಇದೇನೇ ಇರಲಿ ಇದುವರೆಗೂ ಮಠದ ವೆಬ್ ಸೈಟಿನಲ್ಲಿ ಮಾಹಿತಿ ದೊರೆಯದ ಶ್ರೀ ರಘುನಾಥ ತೀರ್ಥರು ಈಗ ಶ್ರೀಪಾದರಾಜರಿಗೆ ಪ್ರೇರಕ ಶಕ್ತಿಯಾದರು ಎನ್ನುವುದೇ ಆಶ್ಚರ್ಯಕರವಾದ ಮಾಹಿತಿ. ಇತಿಹಾಸದಲ್ಲಿ ಆಸಕ್ತರು ಓದಿ ಪಕ್ಕಕಿಡಬಹುದು. ಭಾವುಕರು, ಮಠದ ಕಟ್ಟಾ ಅನುಯಾಯಿಗಳು ಭಲೇ ಎನ್ನಬಹುದು. ಎರಡೂ ಅಲ್ಲದ ನಾನು ಈ ಪುಸ್ತಕದ ಅಗತ್ಯವಾದರೂ ಹೊಸದಾಗಿ ಏನಿತ್ತು? 

Thursday, September 29, 2016

Sri Padmanabha Tirtha ( 1318-1324 )

Sri Padmanabha Tirtha is foremost among the direct disciples of Sri Madhvacharya. He was a distinguished scholar and was recognized and honoured by people of those times as 'The first disciple of Sri Madhwacharya'.
He has the greatest honour of lecturing on the Vedas before an assembly of great scholars and was acclaimed to be a master in expounding the meanings of the Vedas. He is known for his learning, intelligence, everlasting devotion, and detachment to worldly affairs, service to His guru, etc. With all these extraordinary qualities, he has rightly succeeded Sri Madhva in the pontificial seat of Sriman Madhvacharya to which almost all the present day mathas trace their root.
Sri Padmanabha Tirtha's name  before initiation into Sannyasa by Madhvacharya, was Shobhana Bhatta. He was a renowned Advaita Scholar, accomplished logician and had immense faith  in Veda, Mahabharata and Puranas. He is said to have hailed from a region close to the river Godavari Punatamba, Paithan, Maharsadhtra.
He has won over many a great scholar in debates and refuted all the prevalent systems of philosophy before he met and  was defeated by Sri Madhva in a famous debate. His defeat at the hands of Sri Madhvacharya  made the Shobhana Bhatta to renounce the world and accept sanyasa from Sri Madhwacharya.
We feel  how blessed Sri Padmanabha Tirtha was to have had the opportunity of being the direct disciple of the Sarvajna Jagadguru Sri Madhwacharya himself.
After he drank the 'makaranda' - nectar called Brahmasootra Bhasya from Madhva, Sri Padmanabha Tirtha found other's Bhashyas  shallow.
He was so impressed by the teachings of Sri Madhwacharya that he used to enthral the audience by comparing the works of Sri Madhva to a divine Kalpavriksha, capable of fulfilling all of one's desires. His conviction in the doctrine of Sri Madhva can be known from his statement before the audience that the result one gets by studying the works of Madhva is beyond words and thoughts.
He was accredited to be the first to write a commentary, on the great Bhasya of Sri Madhva, which ably brings out the true meaning of the Bhasya. The prolific commentator of Madhva, Sri Jayateertha, honours this great saint in his magnum opus Sriman Nyaya Sudha and pictures him as the serene land, auspicious enough to be the home of the lord of Laxmi, and an ocean which gave rise to a bunch of invaluable pearls called Sannyaya Ratnavali.
Sri Jayateertha owes his scholarship to Sri Padmanabha Tirtha while saying
पद्मनाभ तीर्थाख्ययोगिनोस्तु दृशे मम |
तत्तवमार्गे गमनम्  विना यदुपजीवनम्  ||

I adore Sri Padmanabha Tirtha and look upon him as my guide, without whom, we hardly can pass through understanding of tattvavaada of Acharya Madhva. 
His line of succession via Sri Lakshmeedhara Teertha is present Sripadaraja Matha, Mulabagilu, Kolar District of Karnataka. 


ಶ್ರೀ ಪದ್ಮನಾಭ ತೀರ್ಥರ ವೈಯಕ್ತಿಕ ವಿವರಗಳು ಈ ವರೆಗೂ ನಿಖರವಾಗಿ ತಿಳಿದುಬಂದಿಲ್ಲದಿರುವುದು ವಿಷಾದದ ಸಂಗತಿಯೇ ಸರಿ. ಶ್ರೀಮದಾಚಾರ್ಯರ ಮೊದಲ ಸಾಲಿನ ಶಿಷ್ಯವರ್ಗಕ್ಕೆ ಸೇರಿದ ಶ್ರೀ ಪದ್ಮನಾಭ ತೀರ್ಥರೂ ಘಟ್ಟದ ಮೇಲಿನ ಎಲ್ಲ ಮಾಧ್ವ ಮಠಗಳಿಗೂ ಆದಿ ಗುರುಗಳೆನ್ನುವುದು ನಿರ್ವಿವಾದದ ವಿಷಯ. ಆ ನಂತರ ಅವರ ನೇರ ಪರಂಪರೆಯ ಶ್ರೀ ಲಕ್ಷ್ಮೀಧರ ತೀರ್ಥರ ಬೃಂದಾವನ ಸ್ಥಳ ಈಗಿನ ಮಠದ ಮಾಹಿತಿಯಂತೆ ಕೃಷ್ಣ ಜನ್ಮಭೂಮಿ ಎನಿಸಿರುವ ವೃಂದಾವನವೆಂದೇ ಹೇಳಲಾಗುತ್ತಿದೆ. ಅಲ್ಲಿ ನಿತ್ಯ ಪೂಜಾ ವ್ಯವಸ್ಥೆ ಇದೆಯೋ ಇಲ್ಲವೋ ಸ್ಪಷ್ಟವಾಗಿಲ್ಲ. ಸಂಚಾರತ್ವೇನ ಅವರು ಅಲ್ಲಿಗೆ ಹೋಗಿದ್ದರು ಎನ್ನಬಹುದಾದರೂ, ಎಲ್ಲಿಯೂ ಈ ಬಗ್ಗೆ ಪ್ರಸ್ತಾಪವೇ ಇಲ್ಲದಿರುವುದು ಆಶ್ಚರ್ಯವೇ ಸರಿ. ಅವರ ನಂತರದ ಶ್ರೀಪಾದರಾಜ ಮಠದ ಯತಿಗಳಲ್ಲಿ ಬಹುತೇಕರು ಶ್ರೀರಂಗಮ್,ಈರೋಡು, ಭವಾನಿ,  ಮುಳಬಾಗಿಲು, ಪಾಪಾರಪಟ್ಟಿ, ಮೊದಲಾದ ಹಲವು ಜಾಗಳಲ್ಲಿ ವೃಂದಾವನಸ್ಥ್ರಾಗಿದ್ದಾರೆ. ಒಬ್ಬರು ಅಬ್ಬೂರಿನಲ್ಲಿ ಬ್ರಹ್ಮಣ್ಯ ತೀರ್ಥ ಸನ್ನಿಧಿಯಲ್ಲಿ ವೃಂದಾವನಸ್ಥರಾಗಿದ್ದಾರೆ.
ವಿಶೇಷವೆಂದರೆ ಮುಳಬಾಗಿಲಿನಲ್ಲಿ ಎಣಿಕೆಯಷ್ಟು ಮಂದಿ ಶ್ರೀಪಾದರಾಜ ಮಠದ ಶಿಷ್ಯರಾಗಿದ್ದು, ಬಹುತೇಕರು ಶ್ರೀ ಸತ್ಯಪ್ರಿಯರು ಅಥವಾ ಅವರಿಗಿಂತ ಮೊದಲು ಉತ್ತರಾದಿ ಮಠೀಯರಾಗಿರುವುದು, ಕೆಲವರು ಶ್ರೀ ವ್ಯಾಸರಾಜ ಮಠದವರಾಗಿರುವುದೂ ಹೌದು.
ಶ್ರೀಪಾದರಾಜರಿಂದಲೇ ಈ ಮಠ ಪ್ರಸಿದ್ಧಿ ಪಡೆದ ಕಾರಣ ಅದೇ ಹೆಸರಿನಿಂದ ವಾದಿರಾಜರ ಕಾಲದಿಂದಲೂ ಉಲ್ಲೇಖಿತವಾಗಿದೆ. ವ್ಯಾಸನಕೆರೆ ಪ್ರಭಂಜನ ಅವರು ಹೇಳುವಂತೆ, ಬೇಲೂರಿನ ಸ್ತಂಭವೊಂದ ಮೇಲಿನ ಕಂಜನಾಭ ತೀರ್ಥರು ಪದ್ಮನಾಭ ತೀರ್ಥರೆಂದು ಕೇವಲ ಊಹಿಸಬಹುದು. ಇಲ್ಲದಿದ್ದರೆ, ಅಲ್ಲೊಂದು ಮಾಧ್ವ ಮಠವಿರಬೇಕಾಗಿತ್ತು, ಆದರೆ ಇಲ್ಲ. ಆದ್ದರಿಂದ ವಾದಿರಾಜರ ಮಾತು
  ಲಕ್ಸ್ಮೀನಾರಾಯಣಮುನೇಃ ವಿಬುಧೆಂದ್ರಾರ್ಯ ಯೋಗಿನಃ |
ವ್ಯಾಸತೀರ್ಥ ಮುನೇಶ್ಚಾಪಿ “ ಜಯತೀರ್ಥಾದಿರೇವ ಹಿ||
ಎಂಬ ಶ್ಲೋಕದಲ್ಲಿ ಸ್ಪಷ್ಟವಾಗಿ ಉಲ್ಲೇಖಿತವಾಗಿರುವ ಶ್ರೀಪಾದರಾಜ ಮಠ, ವಿಬುಧೇಂದ್ರ ಮಠ( ಈಗಿನ ರಾಯರ ಮಠ) ವ್ಯಾಸರಾಜ ಮಠ – ಈ ಮಠತ್ರಯಕ್ಕೂ ಶ್ರೀ ಜಯತೀರ್ಥರು “ ಆದಿ ಗುರುಗಳಾಗಿಆದರಣೀಯರೆನಿಸಿದ್ದಾರೆ. ಇಲ್ಲಿ ಶ್ರೀ ವಾದಿರಾಜರು ಸುಳ್ಳು ಹೇಳುವ ಅಗತ್ಯವೇ ಇಲ್ಲ. ಕಾರಣ ಅವರು ಉಡುಪಿಯ ಶ್ರೀ ವಿಷ್ಣುತೀರ್ಥ ( ಸೋದೇ) ಮಠದ ಯತಿಗಳು ಮತ್ತು ಶ್ರೀ ಶ್ರೀಪಾದರಾಜ-ಶ್ರೀ ವ್ಯಾಸರಾಜರ ನಿಕಟ ಪರಿಚಯವಿದ್ದವರು. ಒಂದು ಸಂಪ್ರದಾಯದಂತೆ ಶ್ರೀ ವ್ಯಾಸತೀರ್ಥರೆ ವಾದಿರಾಜರ ವಿದ್ಯಾಗುರುಗಳು ಎಂಬ ನಂಬಿಕೆ ಇದೆ. ಶ್ರೀ ವಾದಿರಾಜ ವಿರಚಿತ ಅಶ್ವಧಾಟಿಯ “ ದ್ವೈಪಾಯನೋತ್ತಮ...ಎಂಬ ಶ್ರೀಪಾದರಾಜಸ್ತೋತ್ರವಿದೆ.
ಇಲ್ಲಿ ನಾನು ಪ್ರಸ್ತುತಪಡಿಸುವುದಿಷ್ಟೆ. ಭೌಗೋಳಿಕ ಕಾರಣಗಳಿಂದಾಗಿ, ಮಾಧ್ವರು ಹಲವು ಮಠಗಳ ಶಿಷ್ಯರಾಗಿದ್ದರೂ ಮೂಲ ಗುರುಗಳು ಶ್ರೀಮನ್ ಮಧ್ವಾಚಾರ್ಯರೆ ಅಲ್ಲವೇ? ತಮ್ಮ ಅಂತ್ಯಕಾಲ ಸಮೀಪಿಸಿದಾಗ, ಅವರು ಅಲ್ಲಿಯೇ ವೃಂದಾವನಸ್ಥರಾಗಿದ್ದಾರೆ. ಇಂಥಾ ಸರಳ ಸತ್ಯವನ್ನು ಅರ್ಥ ಮಾಡಿಕೊಳ್ಳದೆ ನಮ್ಮದು ಮೂಲ ಮಠ ಎಂದು ಯಾರೂ ಕಚ್ಚಾಡುವ ಅಗತ್ಯವೇ ಇಲ್ಲ. ಎಲ್ಲ ಮಾಧ್ವ ಮಠಗಳಿಗೂ ಶ್ರೀ ಮಧ್ವರು, ಶ್ರೀ ಪದ್ಮನಾಭ ತೀರ್ಥರು ಮೂಲ ಮತ್ತು ಪ್ರಥಮ ಗುರುಗಳು ಎಂದರ್ಥಮಾಡಿಕೊಂಡರೆ ಸಾಕು. ನಮ್ಮ 100ಮಂದಿ ಮಾಧ್ವರಲ್ಲಿ 4 ಮಂದಿ ಸಂಸ್ಕೃತ ಬಲ್ಲವರು, ಅದರಲ್ಲಿ ಇಬ್ಬರು ಶಾಸ್ತ್ರಾಧ್ಯಯನ ಮಾಡಿದವರು, ಉಳಿದವರು ಹರಿದಾಸರ ಮೂಲಕವೋ ಕನ್ನಡ ಲಿಪಿಯ ಅನುವಾದಿತ ಗ್ರಂಥಗಳ ಸಹಾಯದಿಂದಲೋ ಯಥಾ ಶಕ್ತಿ ಮಧ್ವಮತದ ಸಿದ್ಧಾಂತವನ್ನು ಸ್ವಲ್ಪ ಅರಿತವರು. ಆದರೆ ಮಠದ ವಿಷಯ ಬಂದಾಗ ನಮ್ಮದೇ ಮೂಲ ಮಠ ಎಂದು ವಾದಿಸುವುದು ನಿರರ್ಥಕ ಮತ್ತು ವಿಹಿತವಲ್ಲ ಎಂದು ನನ್ನ ಅನಿಸಿಕೆ.


Friday, September 16, 2016

Sri Vyasa Tatvajnaru ( 1750-1800)
Sri Vyasa Tatvajnaru
(1750-1800)
Sri Vyasa Tatvajna tirtha is a free ( Bidi Sannyasi) sanyasi, not with Mathadhipatya, chosen by him, which shows his Jnana, Bhakti and utmost Vairagya. He was born as Ayiji Venkataramanacharya son of Narisimhacharya a great Scholar & disciple of Bhuvanndra Tirtharu of Sri Raghavendra Mutt. He, like other Scholars had scant regard for Haridasas.
One day his wife was singing a Kritiof Gopala Dasaru:
Vagatanadalli Sukhavilla adanoolenendare bidadalla
hagaraNa jagadolu migilaayitu pannag shyana nagaranivasaa |
........................................
..........................................
He was very much impressed by this Devaranama. But his Ego as Sudha Paundit did not allow him to meet Bhagnna, whom he thought a good AStrologer of that region. One day, he has to go there to know hisson'sfuture. Gopaladasaru said: 'Achaarre, Barree, Magana chniti hatyadenu? Ava bhaala dooda Vidvamsa agtana bidri, chinti byada'. He sent Venkataranarsimhacharya home with due respects. After listening to this Kriti with depth of Spiritual thought, he was artraced to Dasaru. His son was already in his company.
One day it was almost midnight. Dasaru &; Venkataramana had not done Sandyavandanam, which he never missed. Dasaru understood his dilemma. He said: Look at the Sky. Sun was just setting down. Both completd their Sandyavandane.
Meanwhile Sri Bhuvanendra Swamiji was informed about this brilliant Boy of Ayiji. He sent word to him. Gopala Dasru advised him to take Sanyasa. Sri Bhuvanendra ( Vasudhendra) was ready to nominate Venkataramnacharya as hissuccessor. He taught him Shastra. Panditya & Jnana were ripe in him. After a few days he started moving with Dasaru. He preferred to remain out of Mutt. His Guru appointed another Shishya as his succesor.
One Example of his Kriti:
ನ್ಯಾಯವೇನೈ ಇದು ಮೂಢ
ಜಯ ಬೇಡುವೆ ಗಾಢ |ಪ|
ಜನರನೆರಹಿಕೊಂಡು ಕಪಟ
ವಿನಯಗಳನೆ ತೋರುತಲಿ
ವನಜನಾಭನ ಗುಣಗಳ ಹೆಳಿ
ಧನವ ತರುವುದಿದು ಮೂಢ |೧|
ಪರಮಪದನರುಹಿದ
ಗುರು ಸಮೀರ ಶಾಸ್ತ್ರವನು
ಪರಧನ ಬಯಸಿ ಅವರಿ
ಗರುಹಿಸುವುದಿದು ಮೂಢ |೨|
ಈಶನುತನಾದ ನಮ್ಮ
ವಾಸುದೇವವಿಠಲನ
ದಾಸರ ದಾಸ್ಯವ ಬಿಟ್ಟು ನರರ
ದಾಸನೆನಿಸೋದಿದು ಮೂಢ |೩|
Sri Vyasatatvajna Swamiji has wriitten many Tippanees on Jayatirtha & Vyasaraja works. His Rasarajnee on Nyayasudha Sudha is famous Tippani. Later he settled down in Veni Sompura on the banks of Tungabhadra and continued his Tapas, Dasa-Vyas koota Services. He attained Haripada there on Shravana Bahula AShtamee, this year on 22 Aug. Let us seek his blessings. I will post more about his krits later.
'Venu Soma Pura' is sanctified by its association with deity Shodasubahu Narasimha Deva and Saint Vyasa Tatvajna Teertha the great devotee of the Lord Vishnu, Prana Devaru installed by Sri Vyasa Raja.
Dharmo bhavatu saddharma: MaaragaNaasaantu maargaNaa: |
vahinee vaahinee RAjan ! Syaadaraati paraajayah||
A Riddle given by Sri Vyasa Tatvajnaru to the local ruler Rama BHoopaala when he was attacked by two armies on either sides. He said: Let your KshatriyaDHarma be genuine( BOw be strong) Let TUngabhadra - Krishna overflow, you will win over. It was schorching March. Yey there was a folld overnight. The enemies whom he feared were killed without war. Such is Tapobala Of Sri swamigaLu.
HIS WORKS
ಗ್ರಂಥಗಳು -
* ಮಾನಸಸ್ಮ್ರುತಿ ( ಉಪಾಸನಾಭಾಗ )
* ಸಪ್ತಮಸ್ಕಂದ ಭಾಗವತಕ್ಕೆ ಮಂದನಂದಿನಿ ಎಂಬ ವ್ಯಾಖ್ಯಾನ
* ಗಾಯತ್ರಿ ಸಾರ ಸಂಗ್ರಹ
* ಶ್ರೀಮನ್ಯಾಯಸುಧಾ ವ್ಯಾಖ್ಯಾನ
* ಉಭಯಾನೌಚಿತಿ
* ಸುಧಾದ್ಯುಕ್ತಿರಹಸ್ಯ
* ನ್ಯಾಯಮೃತ ಮಕ್ಷಿಕಾವ್ಯಜನ
* ತಾತ್ಪರ್ಯಚಂದ್ರಿಕಾ ಶರದಾಗಮ
*ಅದ್ವೈತ ಕುಟ್ಟನ
* ನ್ಯಾಯದಮನ
* ಕುಲಿಶ
*ಶ್ರೀಮದ್ಬಿಷ್ಣುತತ್ವನಿರ್ಣಯಕ್ಕೆ "ಲಘುಪ್ರಭಾ" ಮತ್ತು " ಗುರುಪ್ರಭಾ" ಎಂಬ ಎರಡು ವ್ಯಾಖ್ಯಾನಗಳು.
* ಯತಿಪ್ರಣವಕಲ್ಪ ವ್ಯಾಖ್ಯಾನ