Tuesday, August 21, 2018

Rig Bhashya of Acharya Madhva




Sri Madhvacharya is the first thinker who gave us a perfect interpretation of the Vedas, particularly the Rigveda. He rightly insisted that all words & phrases in the Veda refer to the Supreme Reality, Vishnu.

यथैवाज्ञादयः शब्दाः प्रवर्तन्ते जनार्दने ।
तथा निरुक्तिं वक्ष्यामो ज्ञानिनां ज्ञानसिद्धये।
- All words in the Veda refer only to Lord Vishnu, and hence we shall elucidate the etymological meaning of Veda accordingly. The first Sukta of Rigveda is a prayer to the Lord as  Agni= the foremost among divinity. Agraneetvam= the supremacy of Vishnu over other Angels is very much evident in the Veda Suktas.
The Rik ' Agnimeele purohitam' refers to Him, not to the Fire used in the rituals. Agryatva- Supremacy, Agranetrutva- the foremost among the divine, all mean to say that the real Agni is Vishnu. He is indeed Ratnadhaatama- bestower of all precious things to us through what we term Nature, by way of Light, Rains, Crops and what not!
Hence the Rishis, thinkers procured Rayi- spiritual & material wealth only through Agni form of the lord.
Sri Madhva has interpreted 40 Riks of Rigveda as an indicator to showthat all Vedic literature is nothing but prayer to Lord Narayana, the innate ( Antaryaamee) of all Angels, Nature, and the entire gamut of what we know & know not. However it was probably Acharya's indication that following this way of interpretation, the learned understand Veda accordingly as sublime prayer to Vishnu and powers he assigns to Devas.




ಶ್ರೀಮದಾಚಾರ್ಯರ ಋಗ್ಭಾಷ್ಯದ ಸೊಬಗು

ವೇದಭಾಷ್ಯಕಾರರಲ್ಲಿ ಶ್ರೀ ಮಧ್ವಾಚಾರ್ಯರೇ ಮೊದಲಿಗರು. ಅವರು ಋಗ್ವೇದದ 40 ಋಕ್ಕುಗಳಿಗೆ ಮಾತ್ರ ಭಾಷ್ಯ ರಚಿಸಿದ್ದಾರೆ. ಆಚಾರ್ಯರ ಭಾಷ್ಯದ ಉದ್ದೇಶ ಕೇವಲ ವೇದಸೂಕ್ತಗಳಿಗೆ ಅರ್ಥ ಬರೆಯುವುದಷ್ಟೇ ಅಲ್ಲ. ಪ್ರತಿಯೊಂದು ವೇದವೇದಸೂಕ್ತವೂ “ ವೇದೈಶ್ಚ ಸರ್ವೈರಹಮೇವ ವೇದ್ಯಃಎಂಬ ಗೀತಾಚಾರ್ಯ ಶ್ರೀಕೃಷ್ಣ ಪರಮಾತ್ಮನ ಮಾತನ್ನು ಸರಿಯಾಗಿ ಅರ್ಥೈಸಿಕೊಂಡವರು ಜೀವೋತ್ತಮರಾದ ಮುಖ್ಯಪ್ರಾಣಾವತಾರಿ ಶ್ರೀ ಮಧ್ವರೊಬ್ಬರೇ.
  ಗ್ರಂಥದ ಮಂಗಳಾಚರಣ ಪದ್ಯ ಹೀಗಿದೆ:
ನಾರಾಯಣಂ- ನಿಖಿಲಪೂರ್ಣಗುಣಾರ್ಣಮುಚ್ಚ- ಸೂರ್ಯಾಮಿತದ್ಯುತಿ-ಮಶೇಷ ನಿರಸ್ತದೋಷಮ್
ಸರ್ವೇಶ್ವರಂ- ಗುರುಮಜೇಶನುತಂ- ಪ್ರಣಮ್ಯ- ವಕ್ಷ್ಯಾಮೃಗರ್ಥಮತಿ-ತುಷ್ಟಿಕರಂ ತದಸ್ಯ
 ಸಕಲ ಕಲ್ಯಾಣಗುಣಪೂರ್ಣನೂ, ಕೋಟಿಸೂರ್ಯರನ್ನು ಮೀರಿದ ಕಾಂತಿಯುಳ್ಳವನೂ, ದೋಷದೂರನೂ,  ಎಲ್ಲರಿಗೂ ಸ್ವಾಮಿಯೂ, ಬ್ರಹ್ಮ ರುದ್ರೇಂದಾದಿ ವಂದ್ಯನೂ, ಆದ  ಶ್ರೀಮನ್ನಾರಾಯಣನಿಗೆ ನಮಸ್ಕಾರ ಮಾಡಿ, ಆ ಶ್ರೀಹರಿಗೆ ಅತಿಪ್ರಿಯವಾದ ಋಗ್ವೇದದ ಅರ್ಥವನ್ನು ಈ ಭಾಷ್ಯದ ಮೂಲಕ ಹೇಳುತ್ತಿದ್ದೇನೆ.
ಎಂದು ಗ್ರಂಥಾರಂಭದಲ್ಲಿ ಸಂಕಲ್ಪಿಸಿದ ಆಚಾರ್ಯರು ಋಗ್ವೇದ ಸಂಹಿತೆಯ ಮೊದಲ 40 ಸೂಕ್ತಗಳಿಗೆ ಮಾತ್ರ ಭಾಷ್ಯವನ್ನು ರಚಿಸಿದ್ದಾರೆ.
ಶ್ರೀ ಮಧ್ವರಿಗಿಂತ ವೇದಭಾಷ್ಯ ರಚಿಸಿದ ಸಾಯಣಾಚಾರ್ಯರು ವೇದಗಳಿಗೆ ಆಧ್ಯಾತ್ಮಿಕವಾದ ಅರ್ಥವೂ ಇದೆ ಎಂದೊಪ್ಪಿದ್ದರೂ, ಅದರ ಬಗ್ಗೆ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಆದರೆ ಇವರೆಲ್ಲರಿಗಿಂತ ಪ್ರಾಚೀನರಾದ ಯಾಸ್ಕಾಚಾರ್ಯರು ತಮ್ಮ ನಿರುಕ್ತದಲ್ಲಿ ಹೀಗೆ ನುಡಿದಿದ್ದಾರೆ:
ಯದ್ಗೃಹೀತಮವಿಜ್ಞಾತಂ ನಿಗದೇನೈವ ಶಬ್ದ್ಯತೇ
ಅನಗ್ನಿರಿವ ಶುಷ್ಕೇಧೋ ನ ತಜ್ಜ್ವಲತಿ ಕರ್ಹಿಚಿತ್
ವೇದಾಭ್ಯಾಸ ಮಾಡಿದವರೂ ಕೂಡಾ ಆ ಸೂಕ್ತಗಳ ಅರ್ಥವನ್ನು ಯಾರು  ತಿಳಿಯಲು ಪ್ರತ್ನಿಸುವುದೇ ಇಲ್ಲವೋ, ಅವರು ಒಣಗಿದ ಕಟ್ಟಿಗೆಯು ಬೆಂಕಿಯ ಸ್ಪರ್ಶವಿಲ್ಲದೆ ಹೇಗೆ ವ್ಯರ್ಥವಾಗುವುದೋ ಹಾಗೆ ಅವರ ಜ್ಞಾನವು ವ್ಯರ್ಥವಾಗುತ್ತದೆ.

ಈ ಮಾತನ್ನು ಸಾಯಣರು ನೇರವಾಗಿ ಹೇಳದೆ,
ಪೂರ್ವಕಾಂಡೋಕ್ತಸ್ಯ ಧರ್ಮಸ್ಯ ಜ್ಞಾನಂ ಪುಣ್ಯಮ್
ಉತ್ತರ ಕಾಂಡೋಕ್ತಸ್ಯ ಬ್ರಹ್ಮಣೋ ಜ್ಞಾನಂ ಫಲಮ್।
ಎಂದು ವೇದಗಳ ಕರ್ಮಕಾಂಡದ ಅಭ್ಯಾಸದಿಂದ ಕೇವಲ ಪುಣ್ಯಲಾಭವಾಗುತ್ತದೆ. ಜ್ಞಾನಕಾಂಡವನ್ನು ಅಭ್ಯಾಸ ಮಾಡಿದರೆ ಬ್ರಹ್ಮಜ್ಞಾನ ದೊರೆಯುತ್ತದೆಂದು ತಿಳಿಸಿ, ಅಪರೋಕ್ಷವಾಗಿ ವೇದಗಳಿಗೆ ಅಧ್ಯಾತ್ಮಪರ ಅರ್ಥವನ್ನು ತಿಳಿದರೆ ಬ್ರಹ್ಮಜ್ಞಾನಿಯಾಗುತ್ತಾರೆ ಎಂದು ಸೂಚಿಸಿದ್ದಾರೆ. ಇದಕ್ಕೆ ಮೀರಿದ ಅರ್ಥವೊಂದಿದೆ ಎಂಬ ಬಗ್ಗೆ ಅವರು ಪ್ರಯತ್ನಿಸಿಲ್ಲ.
ಆದರೆ ವೇದ ಭಾಗವಾದ ಆಥರ್ವವಣೋಪನಿಷತ್ತಿನಲ್ಲಿ:
ದ್ವೇ ವಿದ್ಯೇ ವೇದಿತವ್ಯೇ ಇತಿಹಾಸ್ಯ ಬ್ರಹ್ಮವಿದೋ ವದಂತಿಪರಾಚೈವಾ&ಪರಾ ಚ।– ವೇದದಲ್ಲಿ ಎರಡು ಪದರದ ಅರ್ಥವಿದೆ, ಒಂದು ಪರಾ ವಿದ್ಯೆ, ಇನ್ನೊಂದು ಅಪರಾ ವಿದ್ಯೆ ಎಂದು ಸ್ಪಷ್ಟಪಡಿಸಿದೆ. ಇದೇ ಉಪನಿಷತ್ತಿನಲ್ಲಿ ಪರಾ ತದಕ್ಷರಮಧಿಗಮ್ಯತೇಎಂದು ಹೇಳಲಾಗಿದೆ. ( ಆ. ಉ. 1. 5, 5)
ಕಾಠಕೋಪನಿಷತ್ತು “ ಸರ್ವೇ ವೇದಾ ಯತ್ಪದಮಾಮನಂತಿಎಲ್ಲ ವೇದಗಳೂ ಆ ಪರಮಾತ್ಮನನ್ನೇ ಹೊಗಳುತ್ತವೆ ಎಂದು ತಿಳಿಸುತ್ತದೆ.
ಹಿರಣ್ಯಗರ್ಭಃ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕ ಆಸೀತ್
ಸ ದಾಧಾರ ಪೃಥಿವೀಂ ದ್ಯಾಮುತೇಮಾಂ ಕಸ್ಮೈ ದೇವಾಯ ಹವಿಷಾ ವಿಧೇಮ॥
ಈ ಮಂತ್ರಕ್ಕೆ ಆಚಾರ್ಯರುಬ್ರಹ್ಮೈವಾಗ್ರ ಇತಿಹ್ಯುಕ್ತ್ವಾ ರುದ್ರಾದೀನಾಂ ತತೋ ಜನಿಃ – ಎಂದು ವ್ಯಾಖ್ಯಾನ ಮಾಡಿ, ಬ್ರಹ್ಮದೇವರೊಬ್ಬರೇ ಜಗತ್ತು ಹುಟ್ಟುವ ಮೊದಲು ಹುಟ್ಟಿ ಭಗವದ್ ಭಜನಾದಿಗಳಿಂದ ಚೆನ್ನಾಗಿದ್ದನು. ಹುಟ್ಟಿದ ವಸ್ತುಗಳಿಗೆ ಅಧಿಪತಿಯಾದ್ದನು. ಆತನು ಪೃಥಿವಿಯನ್ನು ಸ್ವರ್ಗಾದಿಗಳನ್ನು ಧರಿಸಿಕೊಂಡಿದ್ದಾನೆ. ಆದ ಕಾರಣ  ಆ ಬ್ರಹ್ಮದೇವರಿಗಾಗಿ ನಾವು ಹವಿಸ್ಸನ್ನು ಕೊಟ್ಟೆವು ಎಂಬ ವಿವರಣೆಯನ್ನು ನೀಡಿದ್ದಾರೆ.
ಸಾಮಾನ್ಯವಾಗಿ ನಾವು ಊಹಿಸುವ ಕಸ್ಮೈ ದೇವಾಯ ಹವಿಷಾ ವಿಧೇಮ?” ಎಂಬುದು ಪ್ರಶ್ನಾರ್ಥಕವಲ್ಲ! ನಾವು ಯಾವ ದೇವತೆಯನ್ನುದ್ದೇಶಿಸಿ ಹವಿಸ್ಸನ್ನು ಕೊಡೋಣ? ಎಂಬ ಸಂಶಯವಾಗಲಿ, ಇಲ್ಲಿ ಋಷಿಗಳಿಗುಂಟಾಗಲಿಲ್ಲ. ಎಂದರೆ ಚತುರ್ಮುಖ ಬ್ರಹ್ಮನ ನಾಮಧೇಯವಾಗಿದೆ. ಕಸ್ಮೈ= ಯಾರಿಗೆ? ಅಲ್ಲ. ಕ ಎಂದರೆ ಚತುರ್ಮುಖ ಬ್ರಹ್ಮನಾದುದರಿಂದ ಅವರಿಗೆ ಎಂಬ ಚತುರ್ಥೀ ವಿಭಕ್ತಿ ಪ್ರಯೋಗವಿದೆಂದು ಆಚಾರ್ಯರ ಅಭಿಮತ.
ಆದರೆ ಘಂಟಾಘೋಷವಾಗಿ ಸಕಲ ವೇದಗಳೂ ಆ ಶ್ರೀಹರಿಯ ಸ್ತೋತ್ರಗಳೇ ಎಂದು ಧೈರ್ಯವಾಗಿ ಹೇಳಿದ ಕೀರ್ತಿ ಶ್ರೀಮದಾನಂದ ತೀರ್ಥ ಭಗವತ್ಪಾದರಿಗೇ ಸಲ್ಲುತ್ತದೆ.   ಆದರೆ ಆಚಾರ್ಯರು ಋಗ್ವೇದದ ಮೊದಲ 40 ಸೂಕ್ತಗಳಿಗೆ ಮಾತ್ರ  ಏಕೆ ಭಾಷ್ಯರಚನೆ ಮಾಡಿದರು? ಈ ಭಾಷ್ಯಕ್ಕೆ ಉಪಸಂಹಾರ ಪದ್ಯ ಏಕಿಲ್ಲ? ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕುವ  ಅಗತ್ಯವೇ ಇಲ್ಲ.  ಇದೇ ರೀತಿಯಾಗಿ ಋಗ್ವೇದದ ಇತರ ಮಂತ್ರಗಳಿಗೂ ಅರ್ಥವನ್ನು ನಾವು ಮಾಡಿಕೊಳ್ಳಲು ಇದು ಮಾರ್ಗ ದರ್ಶಕವಷ್ಟೇ.
ಋಗ್ಭಾಷ್ಯಕ್ಕೆ ಮೊದಲ ಟೀಕೆ ರಚಿಸಿದ ಶ್ರೀ ಜಯತೀರ್ಥರು ತಮ್ಮ ಟೀಕೆಯ ಕೊನೆಯಲ್ಲಿ:
ದೇವತಾಃ ಕಂಚುಕಾಯಂತೇ ವೇದೋ ವಂದಿಜನಾಯತೇ
ಯಸ್ಯ ತಸ್ಮಿನ್ ರಮಾನಾಥೇ ಸುದೃಢಾ ಪ್ರೀತಿರಸ್ತು ಮೇ
ಯಾವ ರಮಾಪತಿಗೆ ದೇವತೆಗಳು ದಾಸರೋ, ವೇದಗಳು ಸ್ತುತಿಪಾಠಕರೋ ಆ ದೇವನಲ್ಲಿ ನನಗೆ ಸದಾ ದೃಢವಾದ ಪ್ರೀತಿ ( ಭಕ್ತಿ) ಇರಲಿ ಎಂದು ಪ್ರಾರ್ಥಿಸುತ್ತಾರೆ.
ಇದಕ್ಕೆ ಮೊದಲು ಟೀಕಾ ಕೃತ್ಪಾದರು: ನಾಕಾರ್ಷಂ ವಿಸ್ತರಭಯಾದಿಹ ತತ್ ಕ್ಷಮ್ಯತಾಂ ಬುಧೈಃ- ಈ ಭಾಷ್ಯಕ್ಕೆ ವಿಸ್ತಾರವಾದ ಟೀಕೆ ಬರೆಯಲಾಗದಿರುವುದನ್ನು ಸಜ್ಜನರು ಕ್ಷಮಿಸಲು ಎಂದು ವಿನಯದಿಂದ ವಿಜ್ಞಾಪನೆ ಮಾಡಿಕೊಂಡಿದ್ದಾರೆ ಎಂದ ಮೇಲೆ ಈ ಋಗ್ಭಾಷ್ಯದ ಮಹತ್ವ ನಮಗೆ ಅರಿವಾಗುತ್ತದೆ.
ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ ಮಂತ್ರಾರ್ಥ  ಮಂಜರೀಯಲ್ಲಿ ಹೀಗೆ ವಿವರಣೆ ಕೊಡುತ್ತಾರೆ:
ಪೂರ್ವೋತ್ತರಾರ್ಧಾಭ್ಯಾಂ ಸಕಲಾನಿಷ್ಟನಿವೃತ್ತಿಂ ಸರ್ವಾಭೀಷ್ಟಪ್ರಾಪ್ತಿಂ ಚ ಭಗವತಃ ಸಕಾಶಾದ್ಭಕ್ತಾನಾಂ ಪ್ರತಿಪಾದಯನ್ ಮಂತ್ರವ್ಯಾಖ್ಯಾನೇನ ಸಮಾಪಿತವಾನ್ ಭಾಷ್ಯಕಾರಃ
-ತಾವು ರಚಿಸಿದ ಇತರ ಗ್ರಂಥಗಳಲ್ಲಿ ತಮ್ಮ ಮಹಿಮೆಯನ್ನು ಸೂಚ್ಯವಾಗಿ ಯಸ್ಯ ತ್ರೀಣ್ಯುದಿತಾನಿ ವೇದವಚನೇ ಎಂದು ತಿಳಿಸಿ, ಈ ಋಗ್ಭಾಷ್ಯದಲ್ಲಿ ವಿಷ್ಣು ಸರ್ವೋತ್ತಮತ್ವವನ್ನು ಪ್ರತಿಪಾದಿಸುವ
ಉಪಪೃಕ್ತಃ ಕ್ಷತ್ರಿಯೈಃ ಸ ಆವೇಶೇನ ಜನಾರ್ದನಃ
ಹನ್ತಿ ಶತೄಂಶ್ಚ ತೈರ್ದೇವೋ ಭಯೇನ ಸ್ವಾಶ್ರಯಂ ದದೌ
 ಎಂಬ ಇಂದ್ರರೂಪಿ ಎನಿಸಿದ ಪರಮಾತ್ಮನ ಸ್ಮರಣೆಯನ್ನಿಲ್ಲಿ ಉಪಸಂಹಾರವಾಗಿ (  ವಿಷ್ಣೂತ್ಕರ್ಷೋಕ್ತಿಪರಸೂಕ್ತಮಂತೇ ವ್ಯಾಖ್ಯಾಯ ಸಮಾಪಿತವಾನ್ ಭಗವಾನಾಚಾರ್ಯಃ)  ರಚಿಸಿದ್ದಾರೆ ಎಂದು ಸ್ಪಷ್ಟೀಕರಣವನ್ನು ಅನುಗ್ರಹಿಸಿದ್ದಾರೆ.
ಶ್ರೀಮದಾಚಾರ್ಯರು 1) ಉದಾಹರಣೆಗಾಗಿ 40 ಸೂಕ್ತಗಳ ಭಾಷ್ಯ ರಚಿಸಿ, ಅದರಂತೆಯೇ ಎಲ್ಲ ಸೂಕ್ತಗಳೂ ಮೇಲ್ನೋಟಕ್ಕೆ ಯಾವ ದೇವತೆಯನ್ನೇ ಪ್ರಾರ್ಥಿಸಲಿ, ಅದು ಶ್ರೀಹರಿಸ್ತೋತ್ರವೇ ಎಂಬುದನ್ನು ಸೂಚಿಸಲು ಭಾಷ್ಯವನ್ನು ಇಲ್ಲಿಗೇ ಮುಕ್ತಾಯ ಮಾಡಿದ್ದಾರೆ.


ಆದರೆ ಈಗಿರುವ ಮುದ್ರಿತ ಸರ್ವಮೂಲಾದ್ಯಂತ ಶ್ಲೋಕಗಳಲ್ಲಿ
ಉಪಕ್ಷತ್ರಂ ಪೃಂಜೀತ ಹಂತಿ ರಾಜಭಿ
ರ್ಭಯೇ ಚಿತ್ ಸುಕ್ಷಿತಿಂ ದಧೇ
ಈ ಸಾಲುಗಳಿಲ್ಲ.
ನಾಸ್ಯ  ವರ್ತಾಭಿಗಂತಾ ತರುತಾ ಜೇತಾ ಚಾಸ್ಯ ನಹಿ ಕ್ವಚಿತ್
ಯುದ್ಧಂ ಮಹಾಧನಂ ತ್ವರ್ಭಂ ಪ್ರಸಿದ್ಧಂ ಧನಮೇವ ಹಿ ॥
ಎಂಬ ಮಂತ್ರ-ಭಾಗದ  ಕೊನೆಯ ಎರಡು ಸಾಲುಗಳು ಮಾತ್ರ ಮುದ್ರಿತವಾಗಿವೆ.
2) ಕೆಲವು ಪ್ರಕರಣ ಗ್ರಂಥಗಳನ್ನು ಬಿಟ್ಟರೆ ಆಚಾರ್ಯರು ತಮ್ಮೆಲ್ಲ ಗ್ರಂಥಗಳಿಗೂ ಮಂಗಳಾಚರಣ-ಉಪಸಂಹಾರ ಪದ್ಯಗಳನ್ನು ಅನುಗ್ರಹಿಸಿದ್ದಾರೆ. ಆದರೆ ಋಗ್ಭಾಷ್ಯಕ್ಕೆ ಶ್ರೀ ಜಯತೀರ್ಥರ ಕಾಲದಿಂದಲೂ ನಮಗೆ ದೊರೆತ ಋಗ್ಭಾಷ್ಯ ಗ್ರಂಥವು  ಈಗಿರುವಷ್ಟೇ ಲಭ್ಯವಿರುವ ಕಾರಣ ಈ ಗ್ರಂಥವನ್ನು ಇಲ್ಲಿಗೇ ಮುಕ್ತಾಯ ಮಾಡಿದ್ದಾರೆ ಎಂದು ಮಾತ್ರ 
***



Saturday, January 13, 2018

ಹರಪನ ಹಳ್ಳಿ ಭೀಮವ್ವ ( 1823-1902)

ಹರಪನ ಹಳ್ಳಿ  ಭೀಮವ್ವ 
ಕರ್ನಾಟಕ ಹರಿದಾಸ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ನಗಣ್ಯವೇನಲ್ಲ. ಪುರಂದರ ದಾಸರ ಪತ್ನಿ ಲಕ್ಷ್ಮೀಬಾಯಿ ಅವರು “ಶ್ರೀಪುರಂದರವಿಟ್ಠಲ” ಅಂಕಿತದಲ್ಲಿ ಹಲವಾರು ಕೃತಿಗಳನ್ನು ರಚನೆ ಮಾಡಿದ್ದು, ಅವುಗಳನ್ನು ಪುರಂದರ ದಾಸರದ್ದು ಎಂದೇ ಪರಿಗಣಿಸಲಾಗಿದೆ. ಆ ನಂತರ ಬಂದವರಲ್ಲಿ ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವ ಪ್ರಮುಖರು. ಉಳಿದ ಅನೇಕ ಅನಾಮಿಕ ಹರಿದಾಸ ಮಹಿಳೆಯರೂ ಇರಬಹುದು, ಅವರ  ಕೃತಿಗಳು ಪ್ರಚಾರವಾಗದೆ ಕಳೆದುಹೋಗಿರುವ ಸಾಧ್ಯತೆಗಳೇ ಹೆಚ್ಚು.
ಹರಪನಹಳ್ಳಿ ಭೀಮವ್ವನವರು ಈಗಿನ ದಾವಣಗೆರೆ ಜಿಲ್ಲೆಯ ನಾರಾಯಣ ಕೆರೆಯಲ್ಲಿ ( ಈಗ ಮುಳುಗಡೆಯಾಗಿದೆ) 1823ರಲ್ಲಿ ರಘುನಾಥಾಚಾರ್ಯ ಮತ್ತು ರಂಗಮ್ಮ ದಂಪತಿಗಳ ಮಗಳಾಗಿ  ಆಚಾರಸಂಪನ್ನರಾದ ವೈದಿಕ ಕುಟುಂಬದಲ್ಲಿ ಜನ್ಮ ತಾಳಿದರು. ಅವರು ಶ್ರೀ ರಾಯರ ಮಠದ ಅನುಯಾಯಿಗಳಾಗಿದ್ದವರು. ಬಾಲ್ಯದಿಂದಲೂ ಆಕೆ ವಿಲಕ್ಷಣ ಶಿಶುವಾಗಿ ಬೆಳೆದಳು. ಈ ಸಾಧ್ವಿಯ ಬಗ್ಗೆ ಅನೇಕ ಪವಾಡ ಸದೃಶ ಕತೆಗಳಿವೆ. ಮಗುವಿನ ಕೊರಳಿಗೆ ಹಾವು ಸುತ್ತಿಕೊಂಡಿದ್ದು, ಚೇಳು ಕಚ್ಚಲು ವಿಫಲವಾದದ್ದು ಹೀಗೆ. ಸದಾ  ಪರಮಾತ್ಮನ ಧ್ಯಾನಲ್ಲಿರುತ್ತಿದ್ದ ಭೀಮವ್ವನಿಗೆ ಆಗಿನ ಕಾಲದ ಸಂಪ್ರದಾಯದಂತೆ ಬಾಲ್ಯದಲ್ಲಿಯೇ ಮದುವೆಯೂ ಆಯಿತು. ಹನ್ನೊಂದು ವರ್ಷದ ಹುಡುಗಿಗೆ 45 ದಾಟಿದ ಮುನಿಯಪ್ಪ ಎಂಬಾತನೊಡನೆ ವಿವಾಹ ಜರುಗಿತು. ಭೀಮವ್ವ ಈಗ ಕೃಷ್ಣಾಬಾಯಿಯಾದಳು. ಕೆಲವು ವರ್ಷಗಳಲ್ಲಿ ಒಂದು ಗಂಡು, ಒಂದು ಹೆಣ್ಣು ಮಗುವಿನ ತಾಯಿಯೂ ಆದಳು. ಆಕೆಯ ಪತಿ ಮೃತನಾದಾಗ ಆಕೆಗೆ 36 ವರ್ಷವಾಗಿತ್ತು.
ಸಂಪ್ರದಾಯಸ್ಥ ಕುಟುಂಬದ ಆಕೆ ಈಗ ಮಡಿ ಹೆಂಗಸಾದಳು. ಮಕ್ಕಳ ಪೋಷಣೆ, ಮನೆಗೆಲಸದಲ್ಲಿ ಮಗ್ನಳಾದಳು. ಬಾಲ್ಯದಿಂದಲೂ ದೈವ ಭಕ್ತಳಾದ ಭೀಮವ್ವ ತಾನು ಕೇಳಿದ ಪೌರಾಣಿಕ ಪ್ರಸಂಗಗಳನ್ನಾಧರಿಸಿ, ಹಾಡುಗಳನ್ನೂ ಬರೆದಳು. ಆಕೆಯ ಸುಮಾರು 200 ಹಾಡುಗಳು ಮಾತ್ರ ದೊರೆತಿದ್ದು, ಉಳಿದವು ಕಳೆದುಹೋಗಿವೆ. ಇದರಲ್ಲಿ ಉಗಾಭೋಗ, ದ್ವಿಪದಿ, ಆರತಿ ಹಾಡು, ಮದುವೆಮನೆ ಹಾಡು, ಬೀಗರ ಹಾಡುಗಳೂ ಸೇರಿವೆ.
ತನ್ನ ಅಂಕಿತವಾಗಿ ಭೀಮೇಶ ಕೃಷ್ಣ ಎಂದು ಆ ಹಾಡುಗಳನ್ನು ಕೃಷ್ಣನಿಗೆ ಅರ್ಪಿಸಿದಳು. ಆಕೆ ರಚಿಸಿದ 145 ಹಾಡುಗಳು ದೊರೆತಿದ್ದು, ಪ್ರಕಟವೂ ಆಗಿವೆ. 1902ರಲ್ಲಿ ತುಂಗಭದ್ರೆಯ ತೀರದ ಹೊಸೂರು ಎಂಬಲ್ಲಿ ಆಕೆ ದೇಹತ್ಯಾಗ ಮಾಡಿದಳು ಎಂದು ತಿಳಿದುಬರುತ್ತದೆ.



SRI VENUGOPALA KRISHNA, MULABAGILU.