Saturday, October 19, 2024

Venu Gopala Krishna, Vyasaraja Matha, Mulabagilu.


 VENUGOPALA KRISHNA, MULABAGILU.

( Photo Courtesy: Vyasaraja Anjaneya, Bengaluru)

Sri Vyasatirtharu was a student of Sri Lakshminarayana Yogi ( Sripadarajaru) at Mulabagilu, before he moved to Kanchipuram. There are at least 3 monuments related to Vyasarajaru at Mulabagilu. he has consecrated Sanjiva Rayaru at Sripadaraja Matha, and at Narasimha tirtha also, There's a cave in Narasimha tirtha vicinity next to Narasimha srine, where he did daily ahnika and manana.
He had a Mutt at the town where he appointed one Sri Prajna tirtha to manage a Gurukulam for students, being one among 9 he started. A beautuful statue of Venugopala is inside the Matha in the town.

ನಮ್ಮೂರು ಮುಳಬಾಗಿಲಿನ ಒಳಗೆ ಮತ್ತು ಹೊರವಲಯದಲ್ಲಿ ಹಲವಾರು ದೇವಸ್ಥಾನಗಳಿವೆ; ಕೆಲವಕ್ಕೆ ನಿತ್ಯ ಪೂಜೆಯಿಲ್ಲದೆ ವಾರ ಪೂಜೆ ನಡೆಯುತ್ತದೆ. ಪ್ರತಿ ಭಾನುವಾರ ಗುಡಿ ಸುತ್ತುವುದು ನಾವು ಕೆಲವರ ಕೆಲಸ. ನಮ್ ಕಾಲದಲ್ಲಿ ಹಿಸ್ಟರಿ ಓದುವುದು, ಬಿಎ ಮಾಡುವುದು ತೀರ ಶ್ರೀಮಂತರ ಸೋಮಾರಿಗಳ ರೀತಿ; ಸೈನ್ಸು ಓದುವರು ಬುದ್ಧಿವಂತರು, ಬಹುಶಃ ಈಗಲು ಹಾಗೆಯೇ ಇದೆ. ಇಂಜಿನೀಯರಿಂಗ್ ಓದಿದವರು ಪರಮ ಬುದ್ಧಿವಂತರು! ಮ್ಯಾಥ್ಸ್ ನಲ್ಲಿ ಅವರನ್ನು ಹಿಡಿಯೋರೇ ಇಲ್ಲದ ಹಾಗೆ!
ಹೀಗಿರುವಾಗ, ದೇವಾಲಯ ಸುತ್ತುವವರಲ್ಲಿ ನನ್ನ ಜೊತೆಗೆ ಎಂಜಿಕೆ ( ಅವರಿಲ್ಲ), ಕುರುಡುಮಲೆಯ ನರಸಿಂಹನ್ ( ಕಾಲೇಜು ಶಿಕ್ಷಣ ಇಲಾಖೆ ಉಪನಿರ್ದೇಷಕರಾಗಿ ಈಗ ನಿವೃತ್ತ, ಆದರೆ ಕಾರ್ಯ ನಿರತ) , ಪ್ರಭಾಕರ ರಾವ್, ಹೀಗೆ ಹಲವರು ಇರುತ್ತಿದ್ದರು. ನಾವು ಪರಮ ಕುತೂಹಲಿಗಳಾಗಿ ಅಲ್ಲಿಗೆ ಹೋದಾಗ, ಬಾಗಿಲು ಮುಚ್ಚಿಯೋ, ಯಾರೋ ಒಬ್ಬ ವೃದ್ಧ ಬೀಡಿ ಸೇದುತ್ತಾ, ತೆಲುಗುನಲ್ಲಿ ಆ ಬಗ್ಗೆ ತನಗೆ ಗೊತ್ತಿದ್ದ ಕಥೆ ಹೇಳುತ್ತಿದ್ದ. ಶಾಸನಗಳು
ಒಗೆಯುವ ಕಲ್ಲುಗಳಾಗಿ ಅದರ ಮೇಲೆ ಬಟ್ಟೆ ತೊಳೆಯುವ ಸಾಧನಗಳಾಗಿದ್ದವು. ಅಕ್ಷರ ತಿಳಿಯುತ್ತಲೇ ಇರಲಿಲ್ಲ.
ನಮ್ಮ ಮನೆಯ ಸ್ವಲ್ಪ ದೂರದಲ್ಲಿ ವ್ಯಾಸರಾಜ ಮಠವಿತ್ತು, ಅಲ್ಲಿನ ವೇಣುಗೋಪಾಲ ಕೃಷ್ಣ ಅತಿ ಸುಂದರ ವಿಗ್ರಹವಾಗಿ ಪೂಜೆಗೊಳ್ಲುತ್ತಿದ್ದ. ಅಲ್ಲಿ ತುಳಸೀ ಕಟ್ತೆಯೋ ವ್ರುಂದಾವನವೋ ಇದ್ದು, ಅದರ ಮುಂದೆ ಕರವ ಮುಗಿದ ಮುಖ್ಯಪ್ರಾಣ ವಿಗ್ರಹ ಮುದ್ದಾಗಿತ್ತು. ಶ್ರೀ ವ್ಯಾಸತೀರ್ಥರು ಮುಳಬಾಗಿಲಿನಲ್ಲಿ ಶ್ರೀಪಾದರಾಜರ ವಿದ್ಯಾರ್ಥಿಯಾಗಿದ್ದಾಗ ಇಲ್ಲಿ ವಾಸ ಮಾಡುತ್ತಿದ್ದಿರಬಹುದು. ಈಗ ಕಟ್ತಡ ಹಳೆಯದಾಗಿದ್ದರೂ, ಸ್ವಲ್ಪ ದುರಸ್ತಿಯಾಗಿ ವೇಣುಗೋಪಾಲನ ಸ್ಥಳ ಸ್ವಲ್ಪ ಬದಲಾವಣೆಯಾಗಿದೆ; ಮುಂಭಾಗದಲ್ಲಿ ಪೀಠದ ಹತ್ತಿರ ಮುಖ್ಯ ಪ್ರಾಣನಿದ್ದಾನೆ. ಸುಮಾರು 1550-80 ರ ಅವಧಿಯ ಈ ಸುಂದರ ವಿಗ್ರಹ ಸುಮಾರು ಜನರ ಕಣ್ನಿಗೆ ಬಿದ್ದಿಲ್ಲ. ಯಾಕೆಂದರೆ ಇದು ಮಠದ ಒಳಮನೆಯಲ್ಲಿದೆ.
ಫೋಟೋ ಕೃಪೆ: ಶ್ರೀ ವ್ಯಾಸರಾಜ ಆಂಜನೇಯ . ( ಬೆಂಗಳೂರು)