Sri Padmanabha Tirtha is foremost among the direct
disciples of Sri Madhvacharya. He was a distinguished scholar and was
recognized and honoured by people of those times as 'The first disciple of Sri
Madhwacharya'.
He has the greatest honour of lecturing on the Vedas
before an assembly of great scholars and was acclaimed to be a master in
expounding the meanings of the Vedas. He is known for his learning,
intelligence, everlasting devotion, and detachment to worldly affairs, service
to His guru, etc. With all these extraordinary qualities, he has rightly
succeeded Sri Madhva in the pontificial seat of Sriman Madhvacharya to which
almost all the present day mathas trace their root.
Sri Padmanabha Tirtha's name before initiation into Sannyasa by
Madhvacharya, was Shobhana Bhatta. He was a renowned Advaita Scholar,
accomplished logician and had immense faith
in Veda, Mahabharata and Puranas. He is said to have hailed from a
region close to the river Godavari Punatamba, Paithan, Maharsadhtra.
He has won over many a great scholar in debates and refuted
all the prevalent systems of philosophy before he met and was defeated by Sri Madhva in a famous
debate. His defeat at the hands of Sri Madhvacharya made the Shobhana Bhatta to renounce the
world and accept sanyasa from Sri Madhwacharya.
We feel how blessed
Sri Padmanabha Tirtha was to have had the opportunity of being the direct
disciple of the Sarvajna Jagadguru Sri Madhwacharya himself.
After he drank the 'makaranda' - nectar called Brahmasootra
Bhasya from Madhva, Sri Padmanabha Tirtha found other's Bhashyas shallow.
He was so impressed by the teachings of Sri Madhwacharya
that he used to enthral the audience by comparing the works of Sri Madhva to a
divine Kalpavriksha, capable of fulfilling all of one's desires. His conviction
in the doctrine of Sri Madhva can be known from his statement before the
audience that the result one gets by studying the works of Madhva is beyond
words and thoughts.
He was accredited to be the first to write a commentary,
on the great Bhasya of Sri Madhva, which ably brings out the true meaning of
the Bhasya. The prolific commentator of Madhva, Sri Jayateertha, honours this
great saint in his magnum opus Sriman Nyaya Sudha and pictures him as the
serene land, auspicious enough to be the home of the lord of Laxmi, and an
ocean which gave rise to a bunch of invaluable pearls called Sannyaya
Ratnavali.
Sri Jayateertha owes his scholarship to Sri Padmanabha
Tirtha while saying
स पद्मनाभ तीर्थाख्ययोगिनोस्तु दृशे मम |
न तत्तवमार्गे गमनम् विना यदुपजीवनम् ||
I adore Sri Padmanabha
Tirtha and look upon him as my guide, without whom, we hardly can pass through
understanding of tattvavaada of Acharya Madhva.
His line of succession via Sri Lakshmeedhara Teertha is present Sripadaraja Matha, Mulabagilu, Kolar District of Karnataka.
His line of succession via Sri Lakshmeedhara Teertha is present Sripadaraja Matha, Mulabagilu, Kolar District of Karnataka.
ಶ್ರೀ ಪದ್ಮನಾಭ ತೀರ್ಥರ ವೈಯಕ್ತಿಕ ವಿವರಗಳು
ಈ ವರೆಗೂ ನಿಖರವಾಗಿ ತಿಳಿದುಬಂದಿಲ್ಲದಿರುವುದು ವಿಷಾದದ ಸಂಗತಿಯೇ ಸರಿ. ಶ್ರೀಮದಾಚಾರ್ಯರ ಮೊದಲ ಸಾಲಿನ
ಶಿಷ್ಯವರ್ಗಕ್ಕೆ ಸೇರಿದ ಶ್ರೀ ಪದ್ಮನಾಭ ತೀರ್ಥರೂ ಘಟ್ಟದ ಮೇಲಿನ ಎಲ್ಲ ಮಾಧ್ವ ಮಠಗಳಿಗೂ ಆದಿ ಗುರುಗಳೆನ್ನುವುದು
ನಿರ್ವಿವಾದದ ವಿಷಯ. ಆ ನಂತರ ಅವರ ನೇರ ಪರಂಪರೆಯ ಶ್ರೀ ಲಕ್ಷ್ಮೀಧರ ತೀರ್ಥರ ಬೃಂದಾವನ ಸ್ಥಳ ಈಗಿನ
ಮಠದ ಮಾಹಿತಿಯಂತೆ ಕೃಷ್ಣ ಜನ್ಮಭೂಮಿ ಎನಿಸಿರುವ ವೃಂದಾವನವೆಂದೇ ಹೇಳಲಾಗುತ್ತಿದೆ. ಅಲ್ಲಿ ನಿತ್ಯ ಪೂಜಾ
ವ್ಯವಸ್ಥೆ ಇದೆಯೋ ಇಲ್ಲವೋ ಸ್ಪಷ್ಟವಾಗಿಲ್ಲ. ಸಂಚಾರತ್ವೇನ ಅವರು ಅಲ್ಲಿಗೆ ಹೋಗಿದ್ದರು ಎನ್ನಬಹುದಾದರೂ, ಎಲ್ಲಿಯೂ
ಈ ಬಗ್ಗೆ ಪ್ರಸ್ತಾಪವೇ ಇಲ್ಲದಿರುವುದು ಆಶ್ಚರ್ಯವೇ ಸರಿ. ಅವರ ನಂತರದ ಶ್ರೀಪಾದರಾಜ ಮಠದ ಯತಿಗಳಲ್ಲಿ
ಬಹುತೇಕರು ಶ್ರೀರಂಗಮ್,ಈರೋಡು, ಭವಾನಿ, ಮುಳಬಾಗಿಲು, ಪಾಪಾರಪಟ್ಟಿ, ಮೊದಲಾದ
ಹಲವು ಜಾಗಳಲ್ಲಿ ವೃಂದಾವನಸ್ಥ್ರಾಗಿದ್ದಾರೆ. ಒಬ್ಬರು ಅಬ್ಬೂರಿನಲ್ಲಿ ಬ್ರಹ್ಮಣ್ಯ ತೀರ್ಥ ಸನ್ನಿಧಿಯಲ್ಲಿ
ವೃಂದಾವನಸ್ಥರಾಗಿದ್ದಾರೆ.
ವಿಶೇಷವೆಂದರೆ ಮುಳಬಾಗಿಲಿನಲ್ಲಿ ಎಣಿಕೆಯಷ್ಟು
ಮಂದಿ ಶ್ರೀಪಾದರಾಜ ಮಠದ ಶಿಷ್ಯರಾಗಿದ್ದು, ಬಹುತೇಕರು ಶ್ರೀ ಸತ್ಯಪ್ರಿಯರು
ಅಥವಾ ಅವರಿಗಿಂತ ಮೊದಲು ಉತ್ತರಾದಿ ಮಠೀಯರಾಗಿರುವುದು, ಕೆಲವರು
ಶ್ರೀ ವ್ಯಾಸರಾಜ ಮಠದವರಾಗಿರುವುದೂ ಹೌದು.
ಶ್ರೀಪಾದರಾಜರಿಂದಲೇ ಈ ಮಠ ಪ್ರಸಿದ್ಧಿ ಪಡೆದ
ಕಾರಣ ಅದೇ ಹೆಸರಿನಿಂದ ವಾದಿರಾಜರ ಕಾಲದಿಂದಲೂ ಉಲ್ಲೇಖಿತವಾಗಿದೆ. ವ್ಯಾಸನಕೆರೆ ಪ್ರಭಂಜನ ಅವರು ಹೇಳುವಂತೆ, ಬೇಲೂರಿನ
ಸ್ತಂಭವೊಂದ ಮೇಲಿನ ‘ ಕಂಜನಾಭ ತೀರ್ಥರು ಪದ್ಮನಾಭ ತೀರ್ಥರೆಂದು ಕೇವಲ ಊಹಿಸಬಹುದು. ಇಲ್ಲದಿದ್ದರೆ, ಅಲ್ಲೊಂದು
ಮಾಧ್ವ ಮಠವಿರಬೇಕಾಗಿತ್ತು, ಆದರೆ ಇಲ್ಲ. ಆದ್ದರಿಂದ ವಾದಿರಾಜರ ಮಾತು
‘ ಲಕ್ಸ್ಮೀನಾರಾಯಣಮುನೇಃ ವಿಬುಧೆಂದ್ರಾರ್ಯ ಯೋಗಿನಃ |
ವ್ಯಾಸತೀರ್ಥ ಮುನೇಶ್ಚಾಪಿ “ ಜಯತೀರ್ಥಾದಿರೇವ
ಹಿ||
ಎಂಬ ಶ್ಲೋಕದಲ್ಲಿ ಸ್ಪಷ್ಟವಾಗಿ ಉಲ್ಲೇಖಿತವಾಗಿರುವ
ಶ್ರೀಪಾದರಾಜ ಮಠ, ವಿಬುಧೇಂದ್ರ ಮಠ( ಈಗಿನ ರಾಯರ ಮಠ) ವ್ಯಾಸರಾಜ ಮಠ – ಈ ಮಠತ್ರಯಕ್ಕೂ
ಶ್ರೀ ಜಯತೀರ್ಥರು “ ಆದಿ ಗುರುಗಳಾಗಿ’ ಆದರಣೀಯರೆನಿಸಿದ್ದಾರೆ. ಇಲ್ಲಿ ಶ್ರೀ ವಾದಿರಾಜರು ಸುಳ್ಳು ಹೇಳುವ ಅಗತ್ಯವೇ
ಇಲ್ಲ. ಕಾರಣ ಅವರು ಉಡುಪಿಯ ಶ್ರೀ ವಿಷ್ಣುತೀರ್ಥ ( ಸೋದೇ) ಮಠದ ಯತಿಗಳು ಮತ್ತು ಶ್ರೀ ಶ್ರೀಪಾದರಾಜ-ಶ್ರೀ
ವ್ಯಾಸರಾಜರ ನಿಕಟ ಪರಿಚಯವಿದ್ದವರು. ಒಂದು ಸಂಪ್ರದಾಯದಂತೆ ಶ್ರೀ ವ್ಯಾಸತೀರ್ಥರೆ ವಾದಿರಾಜರ ವಿದ್ಯಾಗುರುಗಳು
ಎಂಬ ನಂಬಿಕೆ ಇದೆ. ಶ್ರೀ ವಾದಿರಾಜ ವಿರಚಿತ ಅಶ್ವಧಾಟಿಯ “ ದ್ವೈಪಾಯನೋತ್ತಮ...’ ಎಂಬ ಶ್ರೀಪಾದರಾಜಸ್ತೋತ್ರವಿದೆ.
ಇಲ್ಲಿ ನಾನು ಪ್ರಸ್ತುತಪಡಿಸುವುದಿಷ್ಟೆ.
ಭೌಗೋಳಿಕ ಕಾರಣಗಳಿಂದಾಗಿ, ಮಾಧ್ವರು ಹಲವು ಮಠಗಳ ಶಿಷ್ಯರಾಗಿದ್ದರೂ ಮೂಲ ಗುರುಗಳು ಶ್ರೀಮನ್ ಮಧ್ವಾಚಾರ್ಯರೆ
ಅಲ್ಲವೇ? ತಮ್ಮ ಅಂತ್ಯಕಾಲ ಸಮೀಪಿಸಿದಾಗ, ಅವರು ಅಲ್ಲಿಯೇ
ವೃಂದಾವನಸ್ಥರಾಗಿದ್ದಾರೆ. ಇಂಥಾ ಸರಳ ಸತ್ಯವನ್ನು ಅರ್ಥ ಮಾಡಿಕೊಳ್ಳದೆ ನಮ್ಮದು ಮೂಲ ಮಠ ಎಂದು ಯಾರೂ
ಕಚ್ಚಾಡುವ ಅಗತ್ಯವೇ ಇಲ್ಲ. ಎಲ್ಲ ಮಾಧ್ವ ಮಠಗಳಿಗೂ ಶ್ರೀ ಮಧ್ವರು, ಶ್ರೀ ಪದ್ಮನಾಭ
ತೀರ್ಥರು ಮೂಲ ಮತ್ತು ಪ್ರಥಮ ಗುರುಗಳು ಎಂದರ್ಥಮಾಡಿಕೊಂಡರೆ ಸಾಕು. ನಮ್ಮ 100ಮಂದಿ ಮಾಧ್ವರಲ್ಲಿ 4
ಮಂದಿ ಸಂಸ್ಕೃತ ಬಲ್ಲವರು, ಅದರಲ್ಲಿ ಇಬ್ಬರು ಶಾಸ್ತ್ರಾಧ್ಯಯನ ಮಾಡಿದವರು, ಉಳಿದವರು
ಹರಿದಾಸರ ಮೂಲಕವೋ ಕನ್ನಡ ಲಿಪಿಯ ಅನುವಾದಿತ ಗ್ರಂಥಗಳ ಸಹಾಯದಿಂದಲೋ ಯಥಾ ಶಕ್ತಿ ಮಧ್ವಮತದ ಸಿದ್ಧಾಂತವನ್ನು
ಸ್ವಲ್ಪ ಅರಿತವರು. ಆದರೆ ಮಠದ ವಿಷಯ ಬಂದಾಗ ನಮ್ಮದೇ ಮೂಲ ಮಠ ಎಂದು ವಾದಿಸುವುದು ನಿರರ್ಥಕ ಮತ್ತು
ವಿಹಿತವಲ್ಲ ಎಂದು ನನ್ನ ಅನಿಸಿಕೆ.
1 comment:
Amazing information. Please keep writing this type of articles..Indian Jobs
Post a Comment